ಬದಿಯಡ್ಕ: ನಮೋ ಫೇನ್ಸ್ ಬದಿಯಡ್ಕ ಇವರ ನೇತೃತ್ವದಲ್ಲಿ ತ್ರಿಸ್ತರ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಬಿಜೆಪಿ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.
ಬದಿಯಡ್ಕ ಸಂಸ್ಕøತಿ ಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವನ್ನು ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ಪಿ.ಆರ್. ಸುನಿಲ್ ಉದ್ಘಾಟಿಸಿದರು. ಮುಖಂಡ ಹರಿಪ್ರಸಾದ ರೈ ಪುತ್ರಕ್ಕಳ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಶಂಕರ ಡಿ. ಸಂದೀಪ್ ಬದಿಯಡ್ಕ, ರಾಜೇಶ್ ರೈ ವಳಮಲೆ, ಶಿವಪ್ರಸಾದ್, ಕಾರ್ತಿಕ್ ಕಾಮತ್ ಮೊದಲಾದವರು ನೇತೃತ್ವ ವಹಿಸಿದ್ದರು. ಹಿರಿಯ ನೇತಾರರಾದ ರಾಮಕೃಷ್ಣ ಹೆಬ್ಬಾರ್, ರಾಮಪ್ಪ ಮಂಜೇಶ್ವರ, ವಿಜಯಸಾಯಿ, ಡಿ.ಕೆ.ನಾರಾಯಣನ್ ನಾಯರ್ ಶುಭಕೋರಿದರು. ಅವಿನಾಶ್ ರೈ ಸ್ವಾಗತಿಸಿ, ರಾಜೇಶ್ ಶಕ್ತಿನಗರ್ ವಂದಿಸಿದರು. ಮಹೇಶ್ ವಳಕ್ಕುಂಜ ಕಾರ್ಯಕ್ರಮ ನಿರೂಪಿಸಿದರು.