ತಿರುವನಂತಪುರ: ಕೇರಳ ಬಿಜೆಪಿಯಲ್ಲಿ ನಾಯಕರ ನಡುವೆ ನಿರಂತರ ಭಿನ್ನಾಭಿಪ್ರಾಯಗಳ ಬಗ್ಗೆ ಹಿರಿಯ ನಾಯಕ ಮತ್ತು ಒ. ರಾಜಗೋಪಾಲ್ ಪ್ರತಿಕ್ರಿಯಿಸಿದ್ದಾರೆ. ಎಲ್ಲರನ್ನೂ ತೃಪ್ತಿಪಡಿಸುವ ಸೂತ್ರವನ್ನು ಯಾರೂ ತರಲು ಸಾಧ್ಯವಿಲ್ಲ ಎಂದ ಅವರು ಶೋಭಾ ಸುರೇಂದ್ರನ್ ಮತ್ತು ರಾಜ್ಯ ನಾಯಕತ್ವದ ನಡುವಿನ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿ ಯಾರೂ ಪೂರ್ಣ ತೃಪ್ತರಾಗದ ಸ್ಥಿತಿ ಇಂದಿನದು ಎಂದು ಹೇಳಿದರು.
ಶೋಭಾ ಸುರೇಂದ್ರನ್ ಅಸಮಾಧಾನವನ್ನು ವ್ಯಕ್ತಪಡಿಸದಿರುವುದು ಉತ್ತಮ. ಅವರ ಏಕೈಕ ಸಮಸ್ಯೆ ಎಂದರೆ "ಬಯಸಿದ ಸ್ಥಾನವನ್ನು ಪಡೆಯದಿರುವುದಷ್ಟೇ" ಆಗಿದೆ ಇವುಗಳಲ್ಲಿ ಯಾವುದೂ ಮತದಾರರನ್ನು ಗೊಂದಲಗೊಳಿಸುವುದಿಲ್ಲ ಎಂದು ರಾಜಗೋಪಾಲ್ ಹೇಳಿರುವರು.
ದೊಡ್ಡ ಪಕ್ಷದಲ್ಲಿ ಪ್ರತಿಯೊಬ್ಬರಿಗೂ ಅಂತಹ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳಿರುವುದು ಸಹಜ ಎಂದು ರಾಜಗೋಪಾಲ್ ಹೇಳಿರುವರು. ಇವುಗಳಲ್ಲಿ ಯಾವುದನ್ನೂ ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗುವುದಿಲ್ಲ. ಅದು ಸಂಭವಿಸದಿದ್ದಾಗ ಸಾಕಷ್ಟು ಅಸಮಾಧಾನ ಉಂಟಾಗುತ್ತದೆ ಎಂದು ಅವರು ಹೇಳಿದರು.
ಆರ್ ಎಸ್ ಎಸ್ ಮುಖಂಡ ಎಂ.ಎಸ್.ಗೋಳ್ವಲ್ಕರ್ ಅವರ ಹೆಸರನ್ನು ತಿರುವನಂತಪುರಂನ ಆರ್‍ಜಿಸಿಬಿ ಎರಡನೇ ಕ್ಯಾಂಪಸ್‍ಗೆ ಇರಿಸುವ ವಿವಾದಕ್ಕೂ ಪ್ರತಿಕ್ರಿಯಿಸಿ, ಅಂತಹ ಸಂಸ್ಥೆಗಳ ಹೆಸರು ಕಾಂಗ್ರೆಸ್ಸಿಗರಿಗೆ ಸೇರಿದೆ ಎಂದು ಅವರು ಭಾವಿಸುತ್ತಾರೆ ಎಂದರು.
ಗೋಳ್ವಲ್ಕರ್ ಅವರು ದೇಶದ ಅನನ್ಯತೆಯನ್ನು ತಿಳಿದಿದ್ದರು, ಅದನ್ನು ಅರ್ಥಮಾಡಿಕೊಂಡರು ಮತ್ತು ಅದನ್ನು ಬಲಪಡಿಸಿದರು. ಜನರಿಗೆ ಕೆಲಸ ಮಾಡಲು ಸಾಂಸ್ಥಿಕ ವಾತಾವರಣವನ್ನು ಸೃಷ್ಟಿಸಿದವರು ಗೋಳ್ವಲ್ಕರ್ ಆಗಿದ್ದರು ಎಂದು ರಾಜಗೋಪಾಲ್ ಹೇಳಿದರು. ಗೋಳ್ವಲ್ಕರ್ ಬಗ್ಗೆ ತಿಳಿದಿರುವವರು ಈ ಬಗ್ಗೆ ಪ್ರಶ್ನಿಸುವ ಗೋಜಿಗೇ ಹೋಗರು. ಆದರೆ ಇಂದು ಎಲ್ಲವೂ ಅಲ್ಪ ಜ್ಞಾನ ಮತ್ತು ರಾಜಕೀಯ ಕಣ್ಣಿನ ಡೊಂಬರಾಟದಿಂದ ವಿವಾದಗಳಾಗುತ್ತಿವೆ ಎಮದಿರುವರು.