ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ನಡೆಸಲು ಆಸಕ್ತರಿಗೆ ಅವಕಾಶಗಳಿವೆ. ಶೇ 2 ಜಿ.ಎಸ್.ಟಿ. ಸಹಿತ 3700 ರೂ. ವೇತನ ರೂಪದಲ್ಲಿ ನಿಗದಿಪಡಿಸಲಾಗಿದೆ. ಬೂತ್ ಗಳಲ್ಲಿ ವೀಡಿಯೋಗ್ರಫಿ ಅಗತ್ಯವಿರುವ, ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ಅವರ ವೆಚ್ಚದಲ್ಲಿ ವೀಡಿಯೋಗ್ರಫಿ ನಡೆಸಬಹುದಾಗಿದೆ. ಈ ರೀತಿ ವೀಡಿಯೋಗ್ರಫಿ ಪೂರ್ಣರೂಪದಲ್ಲಿ ರಾಜ್ಯ ಚುನಾವಣೆ ಆಯೋಗದ ಹಕ್ಕಿಗೊಳಗಾಗಿರುತ್ತದೆ. ವೀಡಿಯೋಗ್ರಫಿ ಅಗತ್ಯವಿರುವವರು ನಿಗದಿತ ಮೊಬಲಗು ಜಿಲ್ಲಾ ಚುನಾವಣೆ ಅಧಿಕಾರಿ ಅವರ ಹೆಸರಲ್ಲಿರುವ ಟಿ.ಎಸ್.ಬಿ.ಖಾತೆ (ನಂಬ್ರ.799011400006573)ಯಲಲಿ ಪಾವತಿಸಿ ವೇರಿ ಲಿಸ್ಟ್ ಸಹಿತ ಡಿ.5ರ ಸಂಜೆ 5 ಗಂಟೆಗೆ ಮುಂಚಿತವಾಗಿ ಜಿಲ್ಲಾ ಚುನಾವಣೆ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.