ತಿವನಂತಪುರ:ರಾಜ್ಯದ ಸ್ಥಳೀಯಾಳಿತ ಸಂಸ್ಥೆಗಳ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದ್ದು ಬಹಿರಂಗ ಪ್ರಚಾರ ನಿನ್ನೆ ಸಂಜೆ ಕೊನೆಗೊಂಡಿತು.
ಚುನಾವಣೆ ನಡೆಯುತ್ತಿರುವ ಐದು ಜಿಲ್ಲೆಗಳಲ್ಲಿ ನಾಳೆ(ಮಂಗಳವಾರ) ಮತದಾನ ನಡೆಯಲಿದೆ. ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟು, ಆಲಪ್ಪುಳ, ಪುದುಚೇರಿ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು ಬಹಿರಂಗ ಪ್ರಚಾರ ಶಾಂತಿಯುತವಾಗಿ ಕೊನೆಗೊಂಡಿತು.
ಜಿಲ್ಲೆ, ಬ್ಲಾಕ್ ಹಾಗೂ ಗ್ರಾ.ಪಂ. ಗಳ ವಿವಿಧ ವಿಭಾಗಗಲಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮತದಾರರನ್ನು ನೇರವಾಗಿ ಭೇಟಿಯಾಗಿ ಮತ ಯಾಚಿಸುವ ಪ್ರಚಾರ ಈ ಮೂಲಕ ಕೊನೆಗೊಂಡಿದೆ. ಮೂರಕ್ಕಿಂತ ಹೆಚ್ಚು ವಾಹನಗಳನ್ನು ಬಳಸಬಾರದೆಂದು ಚುನಾವಣಾ ಆಯೋಗ ಶಿಫಾರಸು ಮಾಡಿತ್ತು.
ಸಂಜೆ ಆರು ಗಂಟೆಯ ಬಳಿಕ ವಿವಿಧ ಪಕ್ಷಗಳ, ಸ್ವತಂತ್ರರಾಗಿಯೂ ಸ್ಪರ್ಧಿಸುತ್ತಿರುವವರು ಬಹಿರಂಗ ಪ್ರಚಾರಕ್ಕೆ ಕೊನೆಹಾಡಲು ಸೂಚಿಸಲಾಗಿತ್ತು. ಈ ಬಗ್ಗೆ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೀಮಿಸಲಾಗಿತ್ತು. ನಿಯಮ ಉಲ್ಲಂಘನೆಯಾದರೆ ಅಭ್ಯರ್ಥಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಈ ಹಿಂದೆಯೇ ತಿಳಿಸಿತ್ತು.