ತಿರುವನಂತಪುರ: ರಾಜ್ಯದ ಐದು ಜಿಲ್ಲೆಗಳಲ್ಲಿ ನಿನ್ನೆ ನಡೆದ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯ ಮೊದಲ ಹಂತದ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಮತದಾನ ಕೊನೆಗೊಂಡ ಬಳಿಕ ಹೆಚ್ಚುವರಿ ಒಂದು ಗಂಟೆಯಲ್ಲಿ ಕೋವಿಡ್ ಬಾಧಿತರು ಮತ್ತು ನಿರೀಕ್ಷಣೆಯಲ್ಲಿರುವವರು ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು.
ಅನೇಕ ಬೂತ್‍ಗಳಲ್ಲಿ, ಕೋವಿಡ್ ಬಾಧಿತರು ಮತ್ತು ಪಿಪಿಇ ಕಿಟ್‍ಗಳನ್ನು ಧರಿಸಿದ ಕೋವಿಡ್ ನಿರೀಕ್ಷಣೆಯಲ್ಲಿರುವವರು ಮತ ಚಲಾಯಿಸಿದರು. ಸಂಜೆ 6 ಗಂಟೆಯ ಮೊದಲು ಮತಗಟ್ಟೆಗೆ ಆಗಮಿಸುವವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು.
ಸಂಜೆ 6 ರವರೆಗೆ ಶೇಕಡಾ 72.09 ಜನರು ಮತ ಚಲಾಯಿಸಿದರು ಎಂದು ವರದಿ ತಿಳಿಸಿದೆ. ಅಂತಿಮ ಲೆಕ್ಕಾಚಾರದಲ್ಲಿ ಇದು ಸ್ವಲ್ಪ ಬದಲಾಗಬಹುದು. ತಿರುವನಂತಪುರ ಜಿಲ್ಲೆಯಲ್ಲಿ, ಕೊಲ್ಲಂ, ಪತ್ತನಂತಿಟ್ಟು, ಆಲಪ್ಪುಳ ಮತ್ತು ಇಡುಕ್ಕಿ ಜಿಲ್ಲೆಗಳಿಗಿಂತ ಮತದಾನ ಕಡಿಮೆಯಾಗಿತ್ತು
ವಿವಿಧ ಜಿಲ್ಲೆಗಳಲ್ಲಿ ಮತದಾನದ ಶೇಕಡಾವಾರು (ಸಂಜೆ 6 ರಂತೆ):
ತಿರುವನಂತಪುರ -69.14 ಕೊಲ್ಲಂ -72.79, ಪತ್ತನಂತಿಟ್ಟು 69.36, ಆಲಪ್ಪುಳ 76.49 ಇಡುಕ್ಕಿ 74.03 ರಷ್ಟಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.