ವಾಷಿಂಗ್ಟನ್: ನದಿಗಳ ಸ್ವಚ್ಛತೆ ಹಾಗೂ ಪುನಶ್ಚೇತನಕ್ಕಾಗಿ ಭಾರತ ಕೈಗೊಂಡ ಕ್ರಮಗಳನ್ನು ಅಂತಾರಾಷ್ಟ್ರೀಯ ಬ್ಯಾಂಕ್ ಶ್ಲಾಘಿಸಿದೆ.
ಪುನರ್ ನಿರ್ಮಾಣ ಹಾಗೂ ಅಭಿವೃದ್ಧಿ ಅಂತಾರಾಷ್ಟ್ರೀಯ ಬ್ಯಾಂಕ್ ನ ಹಿರಿಯ ಜಲತಜ್ಞ ಕ್ಸೇವಿಯರ್ ಚಾವೆಟ್ ಬ್ಯುಶೆನ್ ತಮ್ಮ ಹೇಳಿಕೆಯಲ್ಲಿ, ನೀರು ಪೂರೈಕೆ, ಸ್ವಚ್ಛತೆ ಮತ್ತು ಪುನಶ್ಚೇತನಕ್ಕಾಗಿ ಭಾರತ ಆರಂಭಿಸಿದ ಯೋಜನೆಗಳು ಮತ್ತು ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇವಲ ಐದು ವರ್ಷಗಳ ಹಿಂದೆ ಭಾರತದಲ್ಲಿ ಬಯಲು ಶೌಚದ ಸಮಸ್ಯೆ ತೀವ್ರವಾಗಿತ್ತು. ಸುಮಾರು 55 ಕೋಟಿ ಜನ ಬಯಲುಶೌಚವನ್ನೇ ಆಶ್ರಯಿಸಿದ್ದರು. ಭಾರತ ಸರ್ಕಾರ ಕೈಗೊಂಡ ವ್ಯಾಪಕ ಕ್ರಮಗಳಿಂದಾಗಿ ಈಗ ಚಿತ್ರಣ ಬದಲಾಗಿದೆ. ಇದರಿಂದ ಜನರ ದೃಷ್ಟಿಕೋನದಲ್ಲೂ ಬದಲಾವಣೆಯಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.