HEALTH TIPS

ಸಾರ್ವಜನಿಕ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲು ಸಿದ್ಧವಾದ ಇ-ಡ್ರಾಪ್ ವೆಬ್ ಪೋರ್ಟಲ್

 

            ಕಾಸರಗೋಡು: ಸಾರ್ವಜನಿಕ ಚುನಾವಣೆಯಲ್ಲಿ ಪೋಲಿಂಗ್ ಕರ್ತವ್ಯದಲ್ಲಿರುವ ಪ್ರಿಸೈಡಿಂಗ್ ಅಧಿಕಾರಿಗಳ, ಪಸ್ಟ್ ಪೋಲಿಂಗ್ ಅಧಿಕಾರಿಗಳ ಮೊದಲಾದವರ ಕಾಯಕವನ್ನು ದಕ್ಷತೆಯಿಂದ ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲು ಇ-ಡ್ರಾಪ್ ವೆಬ್ ಪೋರ್ಟಲ್ ಸಿದ್ಧವಾಗಿದೆ.

      ಚುನಾವಣೆ ಕರ್ತವ್ಯಕ್ಕೆ ಸಿಬ್ಬಂದಿಯ ನೇಮಕ ಸಂಬಮದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನ್ಯಾಷನಲ್ ಇನ್ ಫಾರ್ಮೆಟಿಕ್ ಸೆಂಟರ್ ಕೇರಳ ಸಂಸ್ಥೆಯು ವೆಬ್ ತಳಹದಿಯಲ್ಲಿ ಇ-ಡ್ರಾಪ್ ಪೋರ್ಟಲ್ ಗೆ ಚಾಲನೆ ನೀಡಿದೆ. ಈ ಮೂಲಕ ಬಹಳ ತ್ರಾಸದಾಯಕವಾಗಿದ್ದ, ಸಂದರ್ಭೋಚತವಾಗಿ ಸಂಪನ್ನಗೊಳಿಸಬೇಕಿದ್ದ ಚಟುವಟಿಕೆಗಳಿಗೆ ಶಾಶ್ವತ ಪರಿಹಾರ ಲಭಿಸಿದೆ. ರಾಜ್ಯ ಚುನಾವಣೆ ಆಯೋಗದ ಮಾರ್ಗಸೂಚಿಯಂತೆ ವಿಕೇಂದ್ರಿತ ಸೌಲಭ್ಯ ಮೂಲಕ ಈ ಪೋರ್ಟಲ್ ಮೂಲಕ ವಿಭಾಗಗಳ ಮುಖ್ಯಸ್ಥರಿಗೆ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ನೀಡಲಾಗುತ್ತದೆ. 

       ಎದೆಹಾಲುಣಿಸುವ ತಾಯಂದಿರು, 2 ವರ್ಷ ಪ್ರಾಯದ ಕೆಳಗಿನ ವಯೋಮಾನದ ಮಕ್ಕಳಿರುವ ಮಹಿಳೆಯರು, ರೋಗದಿಂದ ಬಳಲುತ್ತಿರುವವರು ಮೊದಲಾದವರನ್ನು ಸ್ವಯಂ ಹೊರತುಪಡಿಸಿ, ಇತರರನ್ನು ಕರ್ತವ್ಯಕ್ಕೆ ನೇಮಿಸುತ್ತದೆ. ಜೊತೆಗೆ ಆರ್.ಒ., ಎ.ಆರ್,ಗಳು, ವಿಶೇಷ ಚೇತನರು ಮೊದಲಾದವರ ಸಹಿತ 65 ಸಾವಿರ ಮಂದಿಯನ್ನು ಹೊರತುಪಡಿಸಿ ರಾಜ್ಯದಲ್ಲಿ 2 ಲಕ್ಷ ಪೋಸ್ಟ್ ಗಳನ್ನು ಆರ್ಡರ್ ಮಾಡಲಾಗಿದೆ. 

           ಕಾಸರಗೊಡು ಜಿಲ್ಲೆಯಲ್ಲಿ 1409 ಮತಗಟ್ಟೆಗಳಲ್ಲಿ 8527 ಸಿಬ್ಬಂದಿ ಚುನಾವಣೆ ಕರ್ತವ್ಯದಲ್ಲಿದ್ದಾರೆ. ಇವರಲ್ಲಿ 1482 ಮಂದಿ ರಿಸರ್ವ್ ಸಿಬ್ಬಂದಿಯಾಗಿದ್ದಾರೆ. ಚುನಾವಣೆ ಕರ್ತವ್ಯದಲ್ಲಿರುವವರಲ್ಲಿ 4794 ಮಂದಿ ಮಹಿಳೆಯರು, 3733 ಮಂದಿ ಪುರುಷರು ಇದ್ದಾರೆ. ಜಿಲ್ಲಾಧಿಕಾರಿ ಅವರ ನೇತೃಥ್ವದಲ್ಲಿ ಪೋಸ್ಟ್ ಗಳನ್ನು ಖಚಿತಪಡಿಸಿ  ಮುಖ್ಯಸ್ಥರಿಗೆ ಮರಳಿ ನೀಡಲಾಗುತ್ತದೆ. ಪ್ರಸೈಡಿಂಗ್ ಆಪೀಸರ್ ಗಳು, ಫಸ್ಟ್ ಪೋಲಿಂಗ್ ಆಫೀಸರ್ ಗಳು, ಇಬ್ಬರು ಪೋಲಿಂಗ್ ಆಪೀಸರ್ ಗಳು, ಪೋಲಿಂಗ್ ಸಹಾಯಕರು ಹೀಗೆ 5 ಮಂದಿ ಇರುವ ತಂಡಗಳನ್ನು ಪೋರ್ಟಲ್ ವಿಂಗಡಿಸುತ್ತದೆ. ಅತಿದೂರದ ಪ್ರದೇಶಗಳಲ್ಲಿ, ವನಾಂತರ ಪ್ರದೇಶಗಳಲ್ಲಿ ಪುರುಷ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. 

          ದ್ವಿತೀಯ ಹಂತದ ವಿಂಗಡಣೆಯ ನಂತರ ಚುನಾವಣೆಯ ಹಿಂದಿನ ದಿನ ಸಿಬ್ಬಂದಿ ನೇಮಕಗೊಂಡಿರುವ ಮತಗಟ್ಟೆಗಳ ಸೂಚನೆ ರೂಪದಲ್ಲಿ ಎಸ್.ಎಂ.ಎಸ್. ಕೂಡ ರವಾನೆಗೊಳ್ಳುತ್ತದೆ. ಚುನಾವಣೆ ದಿನ ಅದೇ ಡಾಟಾ ಪೋಲ್ ಮೆನೆಜರ್ ಆಪ್ ನಲ್ಲೂ ಲಭ್ಯವಾಗುತ್ತದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries