ಕೊಚ್ಚಿ: ರಾಜ್ಯ ವಿಧಾನ ಸಭೆಯಲ್ಲಿ ಕೇಂದ್ರ ಕೃಷಿ ಕಾಯ್ದೆ ಹಿಂಪಡೆಯುವ ನಿರ್ಣಯವನ್ನು ಶಾಸಕ, ಬಿಜೆಪಿ ನೇತಾರ ಓ.ರಾಜಗೋಪಾಲ್ ಅವರು ಬೆಂಬಲಿಸಿದ್ದಕ್ಕಾಗಿ ಸಂದೀಪಾನಂದಗಿರಿ ಅವರು ರಾಜಗೋಪಾಲ್ ಅವರನ್ನು ಅಪಹಾಸ್ಯ ಮಾಡಿದ್ದಾರೆ. ವಿಧಾನಸಭೆಯಲ್ಲಿ ನಿರ್ಣಯದ ವಿರುದ್ಧ ಮತ ಚಲಾಯಿಸದ ಮತ್ತು ನಿರ್ಣಯದ ಪರವಾಗಿ ಸಹಕರಿಸಿದ ಘಟನೆ ಕುರಿತು ಚರ್ಚಿಸಿದಾಗ ಸಂದೀಪಾನಂದಿಗಿರಿ ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯಿಸಿದರು.
"ನಾನು ಇಂದು ಬೆಳಿಗ್ಗೆ ಓ.ರಾಜಗೋಪಾಲ್ ಅವರು ಮುಂದಿನ ಚುನಾವಣೆಯಲ್ಲಿ ಎಡ ಸ್ವತಂತ್ರವಾಗಿ ಸ್ಪರ್ಧಿಸಿ ಪಿಣರಾಯಿ ಸಂಪುಟದಲ್ಲಿ ದೇವಸ್ವಂ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ" ಎಂಬ ಕನಸು ಕಂಡಿರುವುದಾಗಿ ವ್ಯಂಗ್ಯೋಕ್ತಿಯಲ್ಲಿ ಸಂದೀಪಾನಂದಗಿರಿ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ. ಅವರು ಪೋಸ್ಟ್ ಮಾಡಿದ ಕಾಮೆಂಟ್ನ ಸ್ಕ್ರೀನ್ಶಾಟ್ ಅನ್ನು ಪೆÇೀಸ್ಟ್ ಮಾಡಿದ್ದಾರೆ.
ಸಂದೀಪಾನಂದಗಿರಿ ಓ. ರಾಜಗೋಪಾಲ್ ಅವರ ಚಿತ್ರವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, 'ಗುಡ್ ರಾಜೇಟನ್ ಒಂದು ಮುತ್ತು' ಎಂದು ಪೋಸ್ಟ್ ನ ಕೆಳಗೆ ಅವರು ತಮಾಷೆಯಾಗಿ ಪೋಸ್ಟ್ ಮಾಡಿದ್ದಾರೆ.
ಏತನ್ಮಧ್ಯೆ, ನಿರ್ಣಯದ ಪರವಾದ ಕ್ರಮವು ವಿವಾದಾಸ್ಪದವಾದ ಬಳಿಕ ರಾಜಗೋಪಾಲ್ ವಿವರಣೆಯೊಂದಿಗೆ ಉಲ್ಲೇಖ ನೀಡಿದ್ದು ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯವನ್ನು ಬಲವಾಗಿ ವಿರೋಧಿಸುವುದಾಗಿ ಹೇಳಿದರು. 'ನನ್ನ ನಿಲುವು ಏನು ಎಂದು ಭಾಷಣದಲ್ಲಿ ನಾನು ಬಲವಾಗಿ ಹೇಳಿದ್ದೇನೆ. ನಾನು ಕೇಂದ್ರ ಮಸೂದೆಯನ್ನು ವಿರೋಧಿಸುವುದಿಲ್ಲ. ಅವರು ಕೇಂದ್ರ ಸರ್ಕಾರವನ್ನೂ ವಿರೋಧಿಸಲಿಲ್ಲ. ಈ ಮಸೂದೆ ರೈತರಿಗೆ ಬಹಳ ಪ್ರಯೋಜನಕಾರಿಯಾಗಿದೆ ಎಂದು ರಾಜಗೋಪಾಲ್ ವಿವರಣೆಯಲ್ಲಿ ತಿಳಿಸಿದ್ದಾರೆ.