HEALTH TIPS

ಬ್ರಿಟನ್‌ನಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ, ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ: ರಾಜ್ಯಗಳಿಗೆ ಕೇಂದ್ರದ ಸೂಚನೆ

       ನವದೆಹಲಿ: ಬ್ರಿಟನ್‌ನಿಂದ ಸ್ವದೇಶಕ್ಕೆ ಮರಳುತ್ತಿರುವವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ, ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

       ಬ್ರಿಟನ್ ವಿಮಾನಗಳನ್ನು ತಾತ್ಕಾಲಿಕ ನಿಷೇಧವನ್ನು ಘೋಷಿಸಿದ ಒಂದು ದಿನದ ನಂತರ, ಹೊಸ ಪ್ರಭೇದದ ಕೊರೋನಾವೈರಸ್  ದೇಶದಲ್ಲಿ ಹಾನಿಯನ್ನುಂಟು ಮಾಡುತ್ತಿದೆ. ಹೀಗಾಗಿ ಸೂಕ್ತ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ  ರಾಜ್ಯಗಳಿಗೆ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಬ್ರಿಟನ್ ನಿಂದ ಮರಳುವವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ, ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು ಎಂದು ಹೇಳಿದೆ. 

         ಸದ್ಯ ಬ್ರಿಟನ್ ನಿಂದ ಆಗಮಿಸುವ ವಿಮಾನಗಳ ನಿಷೇಧವು ಡಿಸೆಂಬರ್ 23ರಿಂದ ಜಾರಿಯಾಗುತ್ತಿದ್ದು ಪ್ರಸ್ತುತ ಆದೇಶ ಡಿಸೆಂಬರ್ 31ರವರೆಗೆ ಮುಂದುವರೆಯಲಿದೆ. 

       ಮಂಗಳವಾರ ಮುಂಜಾನೆ ಹೊರಡಿಸಲಾದ 5 ಪುಟಗಳ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದಲ್ಲಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸೋಮವಾರ-ಮಂಗಳವಾರ ಬ್ರಿಟನ್ ನಿಂದ ಭಾರತಕ್ಕೆ ಆಗಮಿಸುವವರನ್ನು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಬೇಕು. ಪರೀಕ್ಷಾ ವರದಿ ಪಾಸಿಟಿವ್ ಬಂದರೆ ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು ಎಂದು ಹೇಳಿದೆ. 

      ಪ್ರಯಾಣಿಕರಿಂದ ಸಂಗ್ರಹಿಸಲಾದ ಮಾದರಿಗಳನ್ನು ಸೂಕ್ತ ಪ್ರಯೋಗಾಲಯಗಳಲ್ಲಿ ಸ್ಪೈಕ್ ಜೀನ್ ಆಧಾರಿತ ಆರ್ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ, ಅವುಗಳು SARS CoV 2 ನ ಒಂದೇ ರೂಪಾಂತರವನ್ನು ಹೊಂದಿದೆಯೇ ಎಂದು ನಿರ್ಣಯಿಸಬೇಕಿದೆ. ಈ ವೈರಸ್ ಬ್ರಿಟನ್ ನಲ್ಲಿ ಸುಮಾರು 70% ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಗುರುತಿಸಲಾಗಿದೆ.

       ಒಂದು ವೇಳೆ ಅನುಕ್ರಮದ ವರದಿಯು ದೇಶದಲ್ಲಿ ಪ್ರಸರಣಗೊಳ್ಳುತ್ತಿರುವ ಪ್ರಸ್ತುತ SARS-CoV-2 ವೈರಸ್ ಜೀನೋಮ್‌ಗೆ ಅನುಗುಣವಾಗಿರುತ್ತದೆ. ಪ್ರಕರಣದ ತೀವ್ರತೆಗೆ ಅನುಗುಣವಾಗಿ ಹೋಂ ಕ್ವಾರಂಟೈನ್ ಅಥವಾ ಸೌಲಭ್ಯ ಮಟ್ಟದಲ್ಲಿ ಚಿಕಿತ್ಸೆ ಸೇರಿದಂತೆ ನಡೆಯುತ್ತಿರುವ ಚಿಕಿತ್ಸಾ ಮಾರ್ಗಸೂಚಿಗಳನ್ನು ಅನುಸರಿಸಬಹುದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ. 

ಆದರೆ ಜೀನೋಮಿಕ್ ಸೀಕ್ವೆನ್ಸಿಂಗ್ SARS-CoV-2 ನ ಹೊಸ ರೂಪಾಂತರದ ಉಪಸ್ಥಿತಿಯನ್ನು ಸೂಚಿಸಿದರೆ ರೋಗಿಯು ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಬೇಕಿದೆ. 

       ಅಸ್ತಿತ್ವದಲ್ಲಿರುವ ಮಾರ್ಗಸೂಚಿ ಪ್ರಕಾರ, ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತದೆಯಾದರೂ, ಆರಂಭಿಕ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ನಂತರ ರೋಗಿಗೆ ಮತ್ತೆ 14ನೇ ದಿನ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ 14ನೇ ದಿನದಂದು ಮಾದರಿಯು ಪಾಸಿಟಿವ್ ಎಂದು ಕಂಡುಬಂದಲ್ಲಿ 24 ಗಂಟೆಗಳ ಅಂತರದಲ್ಲಿ ಸತತ ಎರಡು ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಬೇಕು.

     ಕೇಂದ್ರವು ಬ್ಯೂರೋ ಆಫ್ ಇಮಿಗ್ರೇಷನ್ ಮೂಲಕ ಬ್ರಿಟನ್ ನಿಂದ ಆಗಮಿಸಿದ ಪ್ರಯಾಣಿಕರ ಪಟ್ಟಿ ಹಾಗೂ ನವೆಂಬರ್ 25ರಿಂದ ಬ್ರಿಟನ್ ಮೂಲಕ ಭಾರತಕ್ಕೆ ಆಗಮಿಸಿದವರ ಪಟ್ಟಿಯನ್ನು ಒದಗಿಸಿದೆ. ಇದರೊಂದಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ.

     ನವೆಂಬರ್ 25ರಿಂದ ಡಿಸೆಂಬರ್ 8ರವರೆಗೆ ಭಾರತಕ್ಕೆ ಆಗಮಿಸಿದ ಬ್ರಿಟನ್ ನಿಂದ ಆಗಮಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಜಿಲ್ಲಾಡಳಿತ ಸಂಪರ್ಕಿಸಿ ಅವರ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ. 



    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries