ತಿರುವನಂತಪುರ: ರಾಜ್ಯದ ಮುಖ್ಯ ಚುನಾವಣಾಧಿಕಾರಿ ಟೀಕಾರಾಂ ಮೀನಾ ಅವರಿಗೆ ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿರುವುದರಿಂದ ಮುಖ್ಯ ಚುನಾವಣಾ ಆಯುಕ್ತರಿಗೆ ಮತದಾನಗೈಯ್ಯುವ ಹಕ್ಕು ಇಲ್ಲವಾಗಿ ಆಶ್ಚರ್ಯ ಮೂಡಿಸಿದೆ. ಟೀಕಾರಾಂ ಮೀನಾ ಅವರ ಮತ ತಿರುವನಂತಪುರದ ಪೂಜಾಪ್ಪುರ ವಾರ್ಡ್‍ನಲ್ಲಿತ್ತು. ಅವರು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹೆಸರು ಪಟ್ಟಿಯಲ್ಲಿ ಅವರ ಹೆಸರೇ ಇಲ್ಲದಿರುವುದು ಬೆಳಕಿಗೆ ಬಂದು ವ್ಯವಸ್ಥೆಯ ವಿಡಂಬನೆಯಾಗಿ ಭಾರೀ ಸುದ್ದಿಯಾಗುತ್ತಿದೆ.
ಕಳೆದ ಬಾರಿ ಸ್ಥಳೀಯ ಸಂಸ್ಥೆಯ ಚುನಾವಣಾ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿಲ್ಲ. ಲೋಕಸಭಾ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದುದರಿಂದ, ಈ ಪಟ್ಟಿಯಲ್ಲೂ ಇದು ಇರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲಾಗಿಲ್ಲ. ಆದರೆ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ತಿಳಿಸಲಾಯಿತು. ಈ ಬಗ್ಗೆ ಮೀನಾ ಅವರು ದೂರು ದಾಖಲಿಸಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿರುವರು. ಬೂತ್ ಮಟ್ಟದ ಅಧಿಕಾರಿ ಈ ಬಗ್ಗೆ ಗಮನಹರಿಸಬಹುದಿತ್ತು ಎಂದು ಅವರು ಹೇಳಿದರು.
ಮೊದಲ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದ ಐದು ಜಿಲ್ಲೆಗಳಲ್ಲಿ ಮಂಗಳವಾರ ಮತದಾನ ಭರದಿಂದ ಸಾಗಿದೆ. ಮೊದಲ ಕೆಲವು ಗಂಟೆಗಳಲ್ಲಿ ಉತ್ತಮ ಮತದಾನ ಶೇಕಡಾವಾರು ದಾಖಲಾಗಿದೆ. ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟು, ಆಲಪ್ಪುಳ ಮತ್ತು ಇಡುಕಿ ಜಿಲ್ಲೆಗಳಲ್ಲಿ ಸುಮಾರು 88 ಲಕ್ಷ ಮತದಾರರು ಮಂಗಳವಾರ ಮತ ಚಲಾಯಿಸಿದರು.
ತಿರುವನಂತಪುರಂ ಮತ್ತು ಕೊಲ್ಲಂ ಕಾರ್ಪೋರೇಶನ್ ಗಳಲ್ಲಿ, ಆಲಪ್ಪುಳದಲ್ಲಿ ಆರು, ತಿರುವನಂತಪುರಂ, ಕೊಲ್ಲಂ ಮತ್ತು ಪತ್ತನಂತಿಟ್ಟು ಜಿಲ್ಲೆಗಳಲ್ಲಿ ತಲಾ ನಾಲ್ಕು ಮತ್ತು ಇಡುಕ್ಕಿಯಲ್ಲಿ ಎರಡು ನಗರಸಭೆಗಳಲ್ಲಿ ಮತದಾನ ನಡೆಯಿತು. ಆಲಪ್ಪುಳವು ಅತಿ ಹೆಚ್ಚು ಬ್ಲಾಕ್ ಪಂಚಾಯಿತಿಗಳನ್ನು ಹೊಂದಿದೆ. ತಿರುವನಂತಪುರ -11, ಕೊಲ್ಲಂ -11, ಪತ್ತನಂತಿಟ್ಟು -8 ಮತ್ತು ಇಡುಕಿ -8 ಜಿಲ್ಲೆಗಳಲ್ಲಿ ಬ್ಲಾಕ್ ಪಂಚಾಯಿತಿಗಳಿವೆ.
ಮೊದಲ ಹಂತದಲ್ಲಿ ಮತದಾನ ನಡೆದ ಜಿಲ್ಲೆಗಳಲ್ಲಿ ತಿರುವನಂತಪುರದಲ್ಲಿ ಅತಿ ಹೆಚ್ಚು ಗ್ರಾಮ ಪಂಚಾಯಿತಿಗಳಿದ್ದವು. ಇತರ ಜಿಲ್ಲೆಗಳಲ್ಲಿನ ಗ್ರಾಮ ಪಂಚಾಯಿತಿಗಳು ಕೊಲ್ಲಂ -68, ಆಲಪ್ಪುಳ -72, ಪತ್ತನಂತಿಟ್ಟು -53 ಮತ್ತು ಇಡುಕ್ಕಿ -52 ಗ್ರಾಮ ಪಂಚಾಯತಿಗಳಲ್ಲಿ ಮತದಾನಗಳು ನಡೆಯಿತು.