HEALTH TIPS

ಹೊಸ ಕೊರೋನಾ ವೈರಾಣುವನ್ನು ಪತ್ತೆ ಮಾಡುವಲ್ಲಿ ಭಾರತ ಕೈತಪ್ಪಿರಬಹುದು: ತಜ್ಞರು

        ನವದೆಹಲಿ: ಹೊಸ ಮಾದರಿಯ ಕೊರೋನಾ ವೈರಾಣುವನ್ನು ಪತ್ತೆ ಮಾಡುವುದರಲ್ಲಿ ಭಾರತ ಎಡವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

         ಬ್ರಿಟನ್ ನಲ್ಲಿ ಹೊಸ ಮಾದರಿಯ ವೈರಾಣು ಪತ್ತೆಯಾದ ಅವಧಿಯಲ್ಲಿ SARS-CoV-2 ಯ ಜೀನೋಮ್‌ಗಳನ್ನು ವಿಶ್ಲೇಷಿಸುವುದು ತುಲನಾತ್ಮಕವಾಗಿ ಕಡಿಮೆ ಇತ್ತು ಎಂದು ವೈರಾಣು ಸ್ವರೂಪಗಳನ್ನು ಅಧ್ಯಯನ ಮಾಡುತ್ತಿರುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

        ಜಾಗತಿಕ ಮಟ್ಟದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಮೂಲಕ ಸಂಗ್ರಹಿಸಲಾಗಿರುವ ಸಾವಿರಾರು ಮಾದರಿಗಳ SARS-CoV-2 ನ್ನು 10 ಕ್ಲೇಡ್ ಗಳನ್ನಾಗಿ ವಿಭಾಗಿಸಲಾಗಿದೆ. ಆದರೆ ಭಾರತದಲ್ಲಿ 4,300 ಜಿನೋಮ್ ಗಳನ್ನು A1a, A2, A2a, A3, B, B1, B4 and I/A3i ಎಂಬ 8 ಕ್ಲೇಡ್ ಗಳಲ್ಲಿ ಪತ್ತೆ ಮಾಡಲಾಗಿದೆ.

        ಜಾಗತಿಕ ಮಟ್ಟದಲ್ಲಿ ಹಾಗೂ ಶೇ.70 ರಷ್ಟು ಭಾರತೀಯರಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದ ಕ್ಲೇಡ್ (ಮಾದರಿ) A2a ಆಗಿದ್ದು, I/A3i ಮಾದರಿ ಭಾರತಕ್ಕೆ ಹೊಸದಾಗಿದೆ.

      "ಭಾರತದಿಂದ 3-4 ತಿಂಗಳುಗಳಲ್ಲಿ ಕಳಿಸಲಾಗಿರುವ ಜಿನೋಮ್ ಗಳು ಕಡಿಮೆ ಇವೆ. ಹೊಸ ಮಾದರಿಯ ವಿಷಪೂರಿತ ವೈರಾಣು ಸೆಪ್ಟೆಂಬರ್ ನಲ್ಲಿ ಕಾಣಿಸಿಕೊಂಡಿದೆ. ಈ ಮಾದರಿಯ ವೈರಾಣು ಈಗಾಗಲೇ ಭಾರತದಲ್ಲಿ ಇರಬಹುದಾದ ಸಾಧ್ಯತೆ ಇದ್ದು, ಈ ವರೆಗೂ ಪತ್ತೆಯಾಗದೆಯೇ ಉಳಿದಿರುವ ಸಾಧ್ಯತೆ ಇದೆ" ಎಂದು ಭಾರತದಲ್ಲಿ ವೈರಾಣು ರೂಪಾಂತರವನ್ನು ಅಧ್ಯಯನ ಮಾಡುತ್ತಿರುವ ಹಿರಿಯ ವಿಜ್ಞಾನಿಗಳು ಹೇಳಿದ್ದಾರೆ.

      ಸಿಎಸ್‌ಐಆರ್- ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್- ಇಂಟಿಗ್ರೇಟೆಡ್ ಬಯೋಲಜಿ (ಐಜಿಐಬಿ) ಸಂಗ್ರಹಿಸಿದ್ದ 4,300 ಜಿನೋಮ್ ಗಳ ಪೈಕಿ ಬಹುಪಾಲು (4,000) ಏಪ್ರಿಲ್-ಆಗಸ್ಟ್ ವರೆಗೂ ಸಂಗ್ರಹಿಸಲಾಗಿದೆ. ಸೆಪ್ಟೆಂಬರ್-ನವೆಂಬರ್ ಅವಧಿಯಲ್ಲಿ ಈ ಸಂಖ್ಯೆ 300 ಕ್ಕೆ ಕ್ಷೀಣಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries