ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ನಿವಾಸಿ 45 ವರ್ಷ ಹರೆಯದ, ಕೂಲಿ ಕಾರ್ಮಿಕರಾದ ಐತ್ತಪ್ಪ ನಾಯ್ಕರು ಇತ್ತೀಚೆಗೆ ಕೂಲಿಯ ಮಧ್ಯೆ ಕಾಡುಹಂದಿಯ ತಿವಿತಕ್ಕೊಳಗಾಗಿ ಮೃತಪಟ್ಟಿದ್ದರು. ಇದರಿಂದ ಅವರ ನಿರ್ಗತಿಕ ಕುಟುಂಬ ಆಧಾರ ಸ್ತಂಭದ ಕುಸಿತದಿಂದ ಕಂಗಾಲಾಗಿದೆ.
ತನ್ನ ಪತ್ನಿ ಹಾಗೂ ವಿದ್ಯಾರ್ಥಿಗಳಾದ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು ಸಮೀಪದ ಮನೆಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಬೇರೆ ವರಮಾನವಿಲ್ಲದ ಬಹಳ ಬಡತನದಲ್ಲಿರುವ ಈ ಕುಟುಂಬಕ್ಕೆ ಐತ್ತಪ್ಪರ ಮರಣದಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಮುಂದಿನ ಜೀವನದ ದಾರಿ ತೋಚದಾಗಿದ್ದು ಆರ್ಥಿಕ ನೆರವಿಗಾಗಿ ನೀರ್ಚಾಲು ನಿವೇದಿತಾ ಸೇವಾ ಮಿಶನ್ ಕಾರ್ಯಕರ್ತರನ್ನು ಸಮೀಪಿಸಿದ್ದು ನೆರವಿಗಾಗಿ ನಿವೇದಿತಾ ತಂಡ ಮನವಿ ಮಾಡಿದೆ. ಆದುದರಿಂದ ದಾನಿಗಳು ಉದಾರ ಮನಸ್ಸಿನಿಂದ ಈ ಕುಟುಂಬಕ್ಕೆ ನೆರವಾಗಬೇಕಾಗಿದೆ. ಹೆಚ್ಚಿನ ವಿವರಕ್ಕೆ 9895095245, 9539193385 ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು. ನೆರವು ನೀಡುವವರು ಶಶಿಕಲಾ ಪಿ. ಕರ್ನಾಟಕ ಬ್ಯಾಂಕ್ ನೀರ್ಚಾಲು ಶಾಖೆಯ ಖಾತೆ ಸಂಖ್ಯೆ 5322500100770901, ಐಎಫ್.ಎಸ್.ಸಿ ಸಂಖ್ಯೆ ಕೆಎಆರ್‍ಬಿ0000532 ಕ್ಕೆ ನೆರವು ನೀಡಬಹುದು.
ನಿರ್ಗತಿಕ ಕುಟುಂಬಕ್ಕೆ ಇತ್ತೀಚೆಗೆಯಷ್ಟೇ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಸರಗೋಡು ಬ್ಲಾ.ಪಂ.ಸದಸ್ಯೆಯಾಗಿ ಆಯ್ಕೆಯಾದ ಅಶ್ವಿನಿ ಬಿ.ಎಂ.ಭೇಟಿ ನೀಡಿ ಸಾಂತ್ವನ ನೀಡಿದರು.