ಕಾಸರಗೋಡು: ಕಾಸರಗೋಡು ಜಿಲ್ಲೆಯ ಸಮಸ್ಯಾತ್ಮಕ ಮತಗಟ್ಟೆಗಳಿಗೆ ಎರಡನೇ ದಿನವೂ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ನೇತೃತ್ವದ ತಂಡ ಭೇಟಿ ನೀಡಿದೆ. ಇಲ್ಲಿ ಸಿದ್ಧಪಡಿಸಬೇಕಾದ ಎಲ್ಲ ಮುಂಜಾಗರೂಕ ಕ್ರಮಗಳ ಸಂಬಂಧ ಅವರು ಮಾತುಕತೆ ನಡೆಸಿ, ಅಗತ್ಯದ ಕ್ರಮ ನಡೆಸಿದರು. ಬುಧವಾರ ಅವರು ಕಾಸರಗೋಡು, ಕಾಞಂಗಾಡ್ ನಗರಸಭೆಗಳ, ಅಜಾನೂರು, ಪುಲ್ಲೂರು-ಪೆರಿಯ, ಚೆಮ್ನಾಡ್, ಮಡಿಕೈ, ಕಯ್ಯೂರು-ಚೀಮೇನಿ, ಪಿಲಿಕೋಡ್, ಪಡನ್ನ, ತ್ರಿಕರಿಪುರ, ಪಳ್ಳಿಕ್ಕರೆ ಗ್ರಾಮ ಪಂಚಾಯತ್ ಗಳ ಸಮಸ್ಯಾತ್ಮಕ ಬೂತ್ ಗಳಿಗೆ ಭೇಟಿ ನೀಡಿದರು.
ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘ ಶ್ರೀ, ರಿಟನಿರ್ಂಗ್ ಆಫೀಸರ್ ಗಳು ಮೊದಲಾದವರು ಜತೆಗಿದ್ದರು. ಮೊದಲ ದಿನವಾಗಿದ್ದ ಮಂಗಳವಾರ ಮಂಜೇಶ್ವರ ಬ್ಲೋಕ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳ ಸಮಸ್ಯಾತ್ಮಕ ಬೂತ್ ಗಳಿಗೆ ತಂಡ ಭೇಟಿ ನೀಡಿತ್ತು.