ಉಪ್ಪಳ: ರಾಜ್ಯದ ಆಡಳಿತ ನಡೆಸುತ್ತಿರುವ ಪಿಣರಾಯಿಯ ಫೆÇೀಟೋ ಮುದ್ರಿಸಿ ವೋಟ್ ಕೇಳಲು ಆಗದ ಎಡರಂಗ, ಮಂಜೇಶ್ವರ ಶಾಸಕನ ಫೆÇೀಟೋ ಮುದ್ರಿಸಿ ವೋಟ್ ಕೇಳಲು ಸಾಧ್ಯವಾಗದ ಮುಸ್ಲಿಂ ಲೀಗ್ ಇವೆರಡೂ ಮಂಜೇಶ್ವರದ ಪ್ರಸ್ತುತ ರಾಜಕೀಯ. ಅಧಿಕಾರ ಉಪಯೋಗಿಸಿ ಜನತೆಯನ್ನು ವಂಚಿಸುವುದು, ಇವರ ದಂಧೆಯಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಮಂಜೇಶ್ವರ ಜಿಲ್ಲಾ ಡಿವಿಶನ್ ಬಿಜೆಪಿ ಅಭ್ಯರ್ಥಿ ಪುಷ್ಪರಾಜ್ ಐಲ್ ಅವರ ಚುನಾವಣಾ ಪ್ರಚಾರ ಸಭೆ ಪ್ರತಾಪ ನಗರ ಗೌರಿ ಗಣೇಶ ಸಭಾಂಗಣದಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಕೇರಳದಲ್ಲಿ ಚರಿತ್ರೆ ನಿರ್ಮಿಸಲಿದೆ ಗೆಲುವು ನಮ್ಮ ಮಂತ್ರ ಎಂದು ಅವರು ಹೇಳಿದರು. ಮಂಡಲಾಧ್ಯಕ್ಷ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ನ್ಯಾಯವಾದಿ.ವಿ.ಬಾಲಕೃಷ್ಣ ಶೆಟ್ಟಿ, ಅಶೋಕ್ ಕುಮಾರ್ ಹೊಳ್ಳ, ವಿಜಯ್ ರೈ, ಆದರ್ಶ್ ಬಿ.ಎಂ ಮೊದಲಾದವರು ಉಪಸ್ಥಿತರಿದ್ದರು. ಹರಿಶ್ಚಂದ್ರ ಮಂಜೇಶ್ವರ ಸ್ವಾಗತಿಸಿ, ವಸಂತ ಮಯ್ಯ ವಂದಿಸಿದರು.