ಕಾಸರಗೋಡು: ಕೋವಿಡ್ 19 ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುಟುಂಬಶ್ರೀ ವತಿಯಿಂದ ಸಂಚಾರ ನಡೆಸುವ ಮಾಸ್ಕ್ ವಾಹನ ತನ್ನ ಪರ್ಯಟನೆ ಆರಂಭಿಸಿದೆ.
ಕುಟುಂಬಶ್ರೀ ಉದ್ದಿಮೆ ಘಟಕಗಳ ಮಹಿಳೆಯರು ಸಿದ್ಧಗೊಳಿಸಿರುವ ಕೆ.ಶ್ರೀ. ಮಾಸ್ಕ್ ಗಳೊಂದಿಗೆ ಡಿ.11 ವರೆಗೆ ಮಾಸ್ಕ್ ವಾಹನ ಕಾಸರಗೋಡು ಜಿಲ್ಲೆಯ ವಿವಿಧೆಡೆ ಸಂಚಾರ ನಡೆಸಲಿದೆ. ಮುಖದಲ್ಲಿ ಆಕರ್ಷಣೆ ಹಾಗೂ ಸುರಕ್ಷಿತವಾಗಿರುವ ರೀತಿಯಲ್ಲಿ ಸಿದ್ಧಗೊಂಡಿರುವ ಮಾಸ್ಕ್ ಗಳು ಇಲ್ಲಿವೆ. ಒಮ್ಮೆ ಬಳಸಿದ ನಂತರ ತೊಳೆದು ಶುಚಿಗೊಳಿಸಿ ಮರುಬಳಕೆ ನಡೆಸಬಹುದಾದ ರೀತಿಯ ಈ ಮಾಸ್ಕ್ ಗಳು ಪ್ರಕೃತಿ ಸ್ನೇಹಿ ಸಾಮಾಗ್ರಿಗಳಿಂದ ತಯಾರುಗೊಂಡಿವೆ. ತಲಾ 30 ರೂ. ದರ ಹೊಂದಿರುವ ಲಕೋಟೆಯೊಂದರಲ್ಲಿ 2 ಮಾಸ್ಕ್ ಗಳಿವೆ. ಡಿ.10ರಂದು ಮಾಸ್ಕ್ ವಾಹನ ಕಾಸರಗೋಡು, ಚೆರ್ಕಳ ಪ್ರದೇಶಗಳಲ್ಲಿ, ಡಿ.11ರಂದು ಕುಂಬಳೆ, ಬಂದ್ಯೋಡು ಪ್ರದೇಶಗಳಲ್ಲಿ ಪರ್ಯಟನೆ ನಡೆಸಲಿದೆ.