ಕಾಸರಗೋಡು: ಜಿಲ್ಲೆಯ ಹಲವು ವಾರ್ಡ್‍ಗಳಲ್ಲಿ ಎಡರಂಗ ಹಾಗೂ ಐಕ್ಯರಂಗಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದರು.
ಜಿಲ್ಲಾ ಪಂಚಾಯತಿ ಚೆಂಗಳ ಡಿವಿಷನ್ ಎನ್‍ಡಿಎ ಅಭ್ಯರ್ಥಿ ಧನಂಜಯ ಕುಮಾರ್ ಮಧೂರು ಅವರ ಚುನಾವಣೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿಯನ್ನು ಸೋಲಿಸಲು ಹಲವೆಡೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ನಿಲ್ಲಿಸಿ ಎರಡೂ ರಂಗಗಳು ಬೆಂಬಲ ನೀಡುತ್ತಿವೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್‍ರೊಂದಿಗೆ ಸಿಪಿಎಂನ ಕೆಲವು ಸದಸ್ಯರು ಹೊಂದಾಣಿಕೆ ಮಾಡಿಕೊಂಡಿರುವುದಾಗಿಯೂ ಇದರಿಂದಾಗಿ ಭೂಮಿ ವಂಚನೆ ಪ್ರಕರಣದಲ್ಲಿ ಬಶೀರ್ ವಿರುದ್ಧ ಎಡರಂಗ ಅವಿಶ್ವಾಸ ಗೊತ್ತುವಳಿ ಮಂಡಿಸದಿರುವುದೆಂದು ಶ್ರೀಕಾಂತ್ ಆರೋಪಿಸಿದರು. ಅಭ್ಯರ್ಥಿ ಧನಂಜಯ ಮಧೂರು ಮಾತನಾಡಿದರು. ಮಣಿಕಂಠನ್ ಅಧ್ಯಕ್ಷತೆ ವಹಿಸಿದ್ದರು.
ಎನ್.ಬಾಬುರಾಜ್, ಕೆ.ಕೃಷ್ಣನ್, ರಾಮಕೃಷ್ಣನ್ ಮುಂತಾದವರು ಭಾಗವಹಿಸಿದ್ದರು.