ವಿಟ್ಲ: ಅಭಿವೃದ್ದಿಯಿಂದ ವಂಚಿತವಾಗಿರುವ ಗ್ರಾಮೀಣ ಪ್ರದೇಶವಾದ ಪೆರುವಾಯಿ ಗ್ರಾ.ಪಂ. ಯ ಕಡಂಬಿಲ ವಾರ್ಡ್ ನಲ್ಲಿ ಹೊಸ ಶಖೆಯ ನಿರ್ಮಾಣ ಕನಸುಗಳೊಂದಿಗೆ ಕಾಂಗ್ರೆಸ್ಸ್ ಬೆಂಬಲಿತ ಅಭ್ಯರ್ಥಿಯಾಗಿ ಯುವ ನಾಯಕಿ ನಫೀಸಾ ಕಡಂಬಿಲ ಕಣಕ್ಕಿಳಿದಿದ್ದಾರೆ.
ವಾರ್ಡ್‍ನ ಸಮಗ್ರ ಅಭಿವೃದ್ದಿ, ಮಹಿಳಾ ಸುರಕ್ಷಣೆ, ಕೃಷಿ-ನೀರಾವರಿ ವ್ಯವಸ್ಥೆಗಳ ಸಮರ್ಪಕತೆ, ರಸ್ತೆ, ಶಾಲೆ, ಇತರ ಮೂಲ ಸೌಕರ್ಯಗಳ ಪುನಶ್ಚೇತನಕ್ಕೆ ವಿವಿಧ ಅಭಿವೃದ್ದಿ ಚಟುವಟಿಕೆಗಳ ಭರವಸೆಗಳನ್ನು ನೀಡಿರುವ ನಫೀಸಾ ಅಟೋ ರಿಕ್ಷಾ ಗುರುತಿನಿಂದ ಸ್ಪರ್ಧಿಸುತ್ತಿದ್ದು ಜನಬೆಂಬಲ ನೀಡಬೇಕೆಂದು ವಿನಂತಿಸಿದ್ದಾರೆ.