HEALTH TIPS

ಪೈವಳಿಕೆ ಗ್ರಾಮ ಪಂಚಾಯತ್ : ಚೀಟಿ ಎತ್ತುವ ಮೂಲಕ ಅಧ್ಯಕ್ಷೆ , ಉಪಾಧ್ಯಕ್ಷೆ ನೇಮಕ

      ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್ ನಲ್ಲಿ ಬುಧವಾರ ಚೀಟಿ ಎತ್ತುವ ಮೂಲಕ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ನೇಮಕ ನಡೆದಿದೆ. 

          ಸಿ.ಪಿ.ಎಂ.ನ ಜಯಂತಿ ಅವರು ಅಧ್ಯಕ್ಷೆಯಾಗಿ ಮತ್ತು ಬಿ.ಜೆ.ಪಿ.ಯ ಪುಷ್ಪಲಕ್ಷ್ಮಿ ಅವರು ಉಪಾಯಕ್ಷರಾಗಿ ಈ ಮೂಲಕ ಆಯ್ಕೆಯಾಗಿದ್ದಾರೆ. 

    ಅಧ್ಯಕ್ಷಗಿರಿಯ ಸ್ಪರ್ಧೆಯಲ್ಲಿದ್ದ ಜಯಂತಿ ಅವರಿಗೆ ಮತ್ತು ಪ್ರತಿಸ್ಪರ್ಧಿ ಬಿ.ಜೆ.ಪಿ.ಯ ಎಂ.ಮಂಜುನಾಥ ಅವರಿಗೆ ತಲಾ 8 ಮತಗಳು ಲಭಿಸಿದ್ದುವು. ಉಪಾಧ್ಯಕ್ಷ ಸ್ಥಾನದ ಸ್ಪರ್ಧಿಗಳಾಗಿದ್ದ ಬಿಜೆ.ಪಿ.ಯ ಪುಷ್ಪಲಕ್ಷ್ಮಿ ಮತ್ತು ಪ್ರತಿಸ್ಪರ್ಧಿ ಸುನಿತಾ ವಾಲ್ಟಿ ಡಿಸೋಝಾ ಅವರಿಗೆ ತಲಾ 8 ಮತಗಳು ಲಭಿಸಿದ್ದುವು. ಎರಡೂ ಸಲ 2 ಮತಗಳು ಅಸಿಂಧುವಾಗಿದ್ದು, ಒಬ್ಬರು ಮತದಾನ ನಡೆಸಿರಲಿಲ್ಲ.


              

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries