ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕರ್ತವ್ಯಕ್ಕೆ ನೇಮಕಗೊಂಡಿರುವ ಪ್ರಿಸೈಡಿಂಗ್ ಆಫೀಸರ್, ಫಸ್ಟ್ ಪೋಲಿಂಗ್ ಆಪೀಸರ್ ಅವರಿಗೆ ಡಿ.10ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತರಬೇತಿ ನಡೆಯಲಿದೆ. ಡಿ.7ರ ನಂತರ ಪ್ರಿಸೈಡಿಂಗ್ ಆಫೀಸರ್, ಫಸ್ಟ್ ಆಫೀಸರ್ ಆಗಿ ನೇಮಕಗೊಂಡು ತರಬೇತಿಗೆ ಹಾಜರಾಗಲು ಸಾಧ್ಯವಾಗದೇ ಇರುವವರಿಗಾಗಿ ಈ ತರಬೇತಿ ಇರುವುದು ಎಂದು ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ವಿದ್ಯುನ್ಮಾನ ಮತಯಂತ್ರಗಳ ಕಮಿಷನಿಂಗ್:
ಚುನಾವಣೆ ಸಂಬಂಧ ಬಿ 147 ಕಾರಡ್ಕ ಬ್ಲಾಕ್ ಪಂಚಾಯತ್ ವಿದ್ಯುನ್ಮಾನ ಮತಯಂತ್ರಗಳ ಕಮೀಷನಿಂಗ್ ಡಿ.10ರಂದು ಬೆಳಗ್ಗೆ 9ರಿಂದ ಬೋವಿಕ್ಕಾನ ಬಿ.ಎ.ಆರ್.ಎಚ್.ಎಸ್.ಎಸ್.ನಲ್ಲಿ ನಡೆಯಲಿದೆ. ಅಭ್ಯರ್ಥಿಗಳು, ಸಂಬಂಧಪಟ್ಟ ಏಜೆಂಟರು ಅಂದು ಬೆಳಗ್ಗೆ 8 ಗಂಟೆಗೆ ಹಾಜರಾಗಿ ಪಾಸ್ ಪಡೆಯಬೇಕು ಎಂದು ಅಧಿಕಾರಿಗಳು ತಿಳಿಸಿದರು.