ಬದಿಯಡ್ಕ: ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಕಾಸರಗೋಡು ಜಿಲ್ಲಾ ಸಮಿತಿ ಸಭೆಯಲ್ಲಿ ಸಾಧಕರನ್ನು ಅಭಿನಂದಿಸಲಾಯಿತು. ಸಮಿತಿಯ ಗೌರವ ಸಲಹೆಗಾರರೂ ಪೆÇೀಷಕರೂ ಆದ ಡಿ.ಕೃಷ್ಣ ದರ್ಬೆತ್ತಡ್ಕ ಸ್ಥಳೀಯ ಆಡಳಿತ ಜನಪ್ರತಿನಿಧಿಗಳಿಗಾಗಿ ಇಪ್ಪತ್ತು ವರ್ಷಗಳನ್ನು ಪೂರೈಸಿದ ಸಮಿತಿಯ ಗೌರವಾಧ್ಯಕ್ಷ ಆನಂದ ಕೆ ಮವ್ವಾರು, ಪ್ರಧಾನ ಕಾರ್ಯದರ್ಶಿ ಶಂಕರ ಡಿ, ಉನ್ನತ ಅಂಕಗಳೊಂದಿಗೆ ಶೈಕ್ಷಣಿಕ ಸಾಧನೆ ಮಾಡಿದ ಸಂದೀಪ್ ಬದಿಯಡ್ಕ ಅವರನ್ನು ಅಭಿನಂದಿಸಲಾಯಿತು.
ಸಮಿತಿ ಜಿಲ್ಲಾಧ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರರಾದ ರಾಮಪ್ಪ ಮಂಜೇಶ್ವರ, ರಾಧಾಕೃಷ್ಣ ಕೆ.ಉಳಿಯತ್ತಡ್ಕ ನಿಟ್ಟೋಣಿ ಬಂದ್ಯೋಡು, ಉಪಾಧ್ಯಕ್ಷ ಸುರೇಶ ಅಜಕ್ಕೋಡು ಕೋಶಾಧಿಕಾರಿ ಡಿ ಕೃಷ್ಣದಾಸ್, ಮಹಿಳಾ ಸಮಿತಿ ಪದಾಧಿಕಾರಿಗಳು, ಯುವಜನ ಸಮಿತಿ ಪದಾಧಿಕಾರಿಗಳು ಅಭಿನಂದನಾ ಭಾಷಣ ಮಾಡಿದರು. ಕೃಷ್ಣ ಡಿ. ಅವರನ್ನು ಯುವಜನ ಸಮಿತಿ ವತಿಯಿಂದಲೂ ಉಳಿದವರನ್ನು ಪ್ರಧಾನ ಸಮಿತಿಯಿಂದಲೂ ಅಭಿನಂದಿಸಲಾಯಿತು. ರಾಮ ಪಟ್ಟಾಜೆ ಕಾರ್ಯಕ್ರಮ ನಿರೂಪಿಸಿದರು.