ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ದೃಷ್ಟಿ ಸಾಮಥ್ರ್ಯ ಕಡಿಮೆ ಹೊಮದಿರುವ, ದೈಹಿಕ ವಿಶ್ವ? ಚೇತನತೆ ಹೊಂದಿರುವವರಿಗೆ ಮತದಾನ ನಡೆಸಲು ಸಹಾಯ ಒದಗಿಸುವ ನಿಟ್ಟಿನಲ್ಲಿ ಸಹಾಯಕರನ್ನು ಒದಗಿಸಲಾಗುವುದು ಎಮದು ರಾಜ್ಯ ಚುನಾವಣೆ ಆಯೋಗದ ಕಮೀಷನರ್ ತಿಳಿಸಿದರು.
ಮತಯಂತ್ರದ ಗುಂಡಿ ಬಳಿಯಿರುವ ಬ್ರೈಲ್ ಲಿಪಿ ಸ್ಪರ್ಶ ನಡೆಸಿ ಮತದಾನ ನಡೆಸಲು ಸಾಧ್ಯವಾಗದು ಎಂದು ಪ್ರಿಸೈಡಿಂಗ್ ಅಧಿಕಾರಿಗೆ ಖಚಿತಗೊಂಡಲ್ಲಿ ಅಂಥ ದೃಷ್ಟಿದೋಷ ಹೊಂದಿರುವ ಮಂದಿಗೆ ಸಹಾಯಕರನ್ನು ಒದಗಿಸಲಾಗುವುದು. ಮತದಾನ ನಡೆಸಲು ಮತದಾರ ತಿಳಿಸುವ ಸಹಾಯಕನನ್ನೇ ಮಂಜೂರು ಮಾಡಲಾಗುವುದು. ಸಹಾಯಕರಿಗೆ 18 ವರ್ಷ ಪ್ರಾಯ 18 ವರ್ಷ ಪ್ರಾಯ ಪೂರ್ತಿಗೊಂಡಿರಬೇಕು.
ನೇರವಾಗಿ ಮತಯಂತ್ರಗಳಲ್ಲಿ ಲಗತ್ತಿಸಿರುವ ಚಿಹ್ನೆಗಳನ್ನು ಗುರುತಿಸಲು, ಬ್ರೈಲ್ ಲಿಪಿಸ್ಪರ್ಶಿಸಿ ಮತದಾನ ನಡೆಸಲು ಸಾಧ್ಯವೇ ಎಂದು ಪ್ರಿಸೈಡಿಂಗ್ ಅಧಿಕಾರಿ ಮತದಾತರಲ್ಲಿ ವಿಚಾರಿಸಿ, ಖಚಿತಗೊಂಡಲ್ಲಿ ಮಾತ್ರ ಸಹಾಯಕರನ್ನು ಒದಗಿಸಲಾಗುವುದು. ಅಭ್ಯರ್ಥಿ, ಪೆÇೀಲಿಂಗ್ ಏಜೆಂಟ್ ಯಾ ಕರ್ತವ್ಯದಲ್ಲಿರುವ ಸಿಬ್ಬಂದಿಯನ್ನು ಸಹಾಯಕರಾಗಿ ಒದಗಿಸಲಾಗುವುದುಇಲ್ಲ. ಮತದಾತರಿಗಾಗಿ ಮತಚಲಾಯಿಸಿದ ನಂತರ ಮತದಾನ ನಡೆಸಿರುವ ವಿಚಾರ ಗುಟ್ಟಾಗಿರುವ ಸ್ವಭಾವ ಹೊಂದಿದ್ದು, ಇನ್ನೊಂದು ಮತಗಟ್ಟೆಯಲ್ಲಿ ಬೇರೊಬ್ಬರಿಗೆ ಇದೇ ರೀತಿ ಸಹಾಯಕನಾಗಿ ಚಟುವಟಿಕೆ ನಡೆಸಿಲ್ಲ ಎಂದು ನಿಗದಿತ ಫಾರಂ ನಲ್ಲಿ ಲಿಖಿತರೂಪದಲ್ಲಿ ತಿಳಿಸಬೇಕು. ಈ ಸಂಬಮಧ 22ನೇ ಫಾರಂನಲ್ಲಿ ಲಿಖಿತ ರೂಪದಲ್ಲಿ ಮಾಹಿತಿ ಪಡೆದು ಪ್ರಿಸೈಡಿಂಗ್ ಅಧಿಕಾರಿ ಪ್ರತ್ಯೇಕ ಲಕೋಟೆಯಲ್ಲಿರಿಸಿ ಚುನಾವಣೆ ಅಧಿಕಾರಿಗೆ ಹಸ್ತಾಂತರಿಸಬೇಕು. ದೈಹಿಕವಾಗಿ ವಿಶೇಷ ಚೇತನರಾದವರು ಸಾಲಾಗಿ ನಿಲ್ಲದೆ ನೇರವಾಗಿ ಮತಗಟ್ಟೆ ಪ್ರವೇಶಿಸಬಹುದು.