ಕಾಸರಗೋಡು: ಕೋವಿಡ್ ಸಂಹಿತೆ ಪಾಲಿಸುವ ಮೂಲಕ ಚುನಾವನೆ ಪ್ರಚಾರ ನಡೆಸುವ ನಿಟ್ಟಿನಲ್ಲಿ ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಭ್ಯರ್ಥಿಗಳಿಗೆ ಸಿ.ಎಚ್.ಸಿ. ವತಿಯಿಂದ ತರಬೇತಿ ಗುರುವಾರ ಕುಂಬಳೆ ಕೃಷಿಭವನದಲ್ಲಿ ಜರುಗಿತು.
ಸಾನಿಟೈಸರ್, ಮಾಸ್ಕ್ ಬಳಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸಹಿತ ಕಟ್ಟುನಿಟ್ಟುಗಳನ್ನು ಪಾಲಿಸಿಕೊಂಡು ಪ್ರಚಾರ ನಡೆಸುವ ಕುರಿತು ತರಬೇತಿ ನೀಡಲಾಯಿತು. ಒಟ್ಟು 69 ಮಂದಿ ಅಭ್ಯರ್ಥಿಗಳಲ್ಲಿ 55 ಮಂದಿ 2 ಬ್ಯಾಚ್ ಗಳಲ್ಲಿ ತರಬೇತಿಯಲ್ಲಿ ಭಾಗಿಗಳಾದರು.
ಗ್ರಾಮ ಪಂಚಾಯತ್ ಸಹಾಯಕ ಕಾರ್ಯದರ್ಶಿ ಪಿ.ಟಿ.ದಿವೇಷ್ ಅಧ್ಯಕ್ಷತೆ ವಜಹಿಸಿದ್ದರು. ಬ್ಲೋಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ತರಗತಿ ನಡೆಸಿದರು. ಆರೋಗ್ಯ ಇನ್ಸ್ ಪೆಕ್ಟರ್ ಕುರ್ಯಾಕೋಸ್ ಈಪ್ಪನ್, ಕಿರಿಯ ಆರೋಗ್ಯ ಇನ್ಸ್ ಪೆಕ್ಟರ್ ಹರೀಶ್ ಉಪಸ್ಥಿತರಿದ್ದರು.