ತಿರುವನಂತಪುರ: 2021 ರ ಎಸ್‍ಎಸ್‍ಎಲ್‍ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಮಾರ್ಚ್ 17 ರಿಂದ 30 ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳು ದಿನದ ಎರಡು ಅವಧಿಗಳಲ್ಲಿ ಇರುತ್ತದೆ.
ಪ್ಲಸ್ ಟು ಪರೀಕ್ಷೆ ಬೆಳಿಗ್ಗೆ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಧ್ಯಾಹ್ನ ಬಳಿಕ ನಡೆಯಲಿದೆ. ಕೋವಿಡ್ ಪರಿಸ್ಥಿತಿ ಗಮನಿಸಿ ಪರೀಕ್ಷೆಯನ್ನು ನಡೆಸಲು ಅಗತ್ಯದ ಮಾರ್ಗಸೂಚಿಗಳನ್ನು ನಂತರ ನೀಡಲಾಗುತ್ತದೆ.
ಎಸ್‍ಎಸ್‍ಎಲ್‍ಸಿ ಪರೀಕ್ಷಾ ಶುಲ್ಕವನ್ನು ಬುಧವಾರ ದಿಂದ (23/12/2020) ರಿಂದ ಜನವರಿ 7 ರವರೆಗೆ ಮತ್ತು ಜನವರಿ 8 ರಿಂದ 12 ರವರೆಗೆ ದಂಡದೊಂದಿಗೆ ಪರೀಕ್ಷಾ ಕೇಂದ್ರಗಳಲ್ಲಿ ಸ್ವೀಕರಿಸಲಾಗುತ್ತದೆ. ಹೈಯರ್ ಸೆಕೆಂಡರಿ ಪರೀಕ್ಷೆಯ ಶುಲ್ಕವನ್ನು ಜನವರಿ 4 ರವರೆಗೆ ದಂಡವಿಲ್ಲದೆ ಪಾವತಿಸಬಹುದು. ಸೂಪರ್ ಫೈನ್‍ನೊಂದಿಗೆ 15 ರವರೆಗೆ ಅರ್ಜಿ ಸಲ್ಲಿಸಬಹುದು.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಅವಲೋಕಿಸಿ ಪರೀಕ್ಷೆಯನ್ನು ಕಟ್ಟುನಿಟ್ಟಿನ ನಿಯಂತ್ರಣದಲ್ಲಿ ನಡೆಸಲಾಗುವುದು. ಕಾರ್ಯವಿಧಾನಗಳು ಕೋವಿಡ್ ಮಾನದಂಡಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತವೆ. ಅಧಿಕಾರಿಗಳು ಶೀಘ್ರದಲ್ಲೇ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡುತ್ತಾರೆ.