ತಿರುವನಂತಪುರ: ಕೋವಿಡ್ ಲಸಿಕೆಯ ಉಚಿತ ವಿತರಣೆ ಸಂಬಂಧ ಮಾಡಿರುವ ಘೋಷಣೆಯ ಕುರಿತು ಚುನಾವಣಾ ಆಯೋಗವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ವಿವರಣೆ ಪಡೆಯಲಿದೆ. ಮುಖ್ಯಮಂತ್ರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಕೋವಿಡ್ ಲಸಿಕೆ ಉಚಿತವಾಗಿ ನೀಡಲಾಗುವುದು ಎಂಬ ಮುಖ್ಯಮಂತ್ರಿಯ ಹೇಳಿಕೆ ವಿರುದ್ಧ ಯುಡಿಎಫ್ ಮತ್ತು ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಉತ್ತರಿಸಲು ಸಿಎಂಗೆ ಸಮಯ ಮಿತಿಯನ್ನು ನೀಡಿಲ್ಲ. ಆಯೋಗವು ಆದಷ್ಟು ಬೇಗ ವಿವರಣೆ ಕೇಳಿದೆ. ಚುನಾವಣಾ ಆಯುಕ್ತ ವಿ ಭಾಸ್ಕರನ್ ಅವರು ಲಸಿಕೆ ನೀಡುವ ಸಂದರ್ಭಗಳನ್ನು ತಿಳಿದುಕೊಳ್ಳಬೇಕೆಂದು ಒತ್ತಾಯಿಸಿದರು.
ಆಯೋಗವು ಮುಖ್ಯಮಂತ್ರಿಯ ವಿವರಣೆಯನ್ನು ಅತೃಪ್ತಿಕರವೆಂದು ಕಂಡುಕೊಂಡರೆ, ಅದು ಉಲ್ಲಂಘನೆಯಾಗಿ ತಕ್ಕ ಕ್ರಮದೊಂದಿಗೆ ಮುಂದುವರಿಯುತ್ತದೆ. ಎಚ್ಚರಿಕೆ ನೀಡುವ ಅಥವಾ ಕಠಿಣ ಕ್ರಮ ಕೈಗೊಂಡೂ ಆಯೋಗ ಕಾರ್ಯತಂತ್ರ ಹೆಣೆಯಬಹುದಾಗಿದೆ.
ಕೋವಿಡ್ ಪರಿಶೀಲನಾ ಸಭೆಯ ನಂತರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಿವಿಮ್ ಕೋವಿಡ್ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದರು. ಎಷ್ಟು ಜನರಿಗೆ ಲಸಿಕೆ ನೀಡಲಾಗುವುದು ಎಂಬುದು ಸ್ಪಷ್ಟವಾಗಿಲ್ಲ. ಮೂರನೇ ಹಂತದ ಚುನಾವಣೆ ನಡೆಯುವ (ನಿನ್ನೆ)ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳ ಈ ಹೇಳೀಕೆ ರಾಜಕೀಯ ಪ್ರೇರಿತ, ಮತಗಳಿಕೆಯ ತಂತ್ರ ಮತ್ತು ಕಾನೂನು ಉಲ್ಲಂಘನೆ ಎಂದು ಪ್ರತಿಪಕ್ಷ ಮತ್ತು ಬಿಜೆಪಿ ರಂಗಕ್ಕಿಳಿದಿವೆ.