ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಹೇಳಿದ್ದಾರೆ. ತನ್ನ ವಿರುದ್ಧದ ಆರೋಪಗಳು ಆಧಾರರಹಿತ ಮತ್ತು ದುರದೃಷ್ಟಕರ ಎಂದು ಸ್ಪೀಕರ್ ಹೇಳಿದರು. ಆದರೆ, ಸ್ವಪ್ನಾ ಸುರೇಶ್ ಅವರ ಪರಿಚಯ ಇದೆ ಎಂದು ಸ್ಪೀಕರ್ ಹೇಳಿದರು.
'ಸ್ವಪ್ನಾ ಸುರೇಶ್ ನನಗೆ ಗೊತ್ತು. ಅವರೊಂದಿಗೆ ನನಗೆ ಸ್ನೇಹವಿದೆ. ಆದರೆ ಅವರ ಆಘಾತಕಾರಿ ಹಿನ್ನೆಲೆ ತಿಳಿದ ಬಳಿಕ ಅವರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಸ್ಪೀಕರ್ ವಿವರಿಸಿದರು. ಅವರ ಹಿನ್ನೆಲೆ ನಾನು ತಿಳಿದಿರಬೇಕಿತ್ತು. ಅದರಲ್ಲಿ ಒಂದು ಸಣ್ಣ ತಪ್ಪು ಆಗಿದೆ 'ಎಂದು ಸ್ಪೀಕರ್ ಹೇಳಿದರು.
ಸ್ವಪ್ನಾ ಪರಿಶುದ್ದೆ ಎಂಬುದು ನನ್ನ ಅಭಿಪ್ರಾಯವಲ್ಲ, ಈ ಹಿನ್ನೆಲೆಯ ಟೀಕೆಗೆ ನನ್ನನ್ನು ಗುರಿಯಾಗಿಸಬಾರದು. ಆದಾಗ್ಯೂ, ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಇಂತಹ ಋಣಾತ್ಮಕ ಅಂಶಗಳು ಪ್ರಜಾಪ್ರಭುತ್ವಕ್ಕೆ ಭೂಷಣವಲ್ಲ" ಎಂದು ಅವರು ಹೇಳಿದರು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳಿಂದ ಯಾವುದೇ ಸಹಾಯ ಪಡೆದಿಲ್ಲ. ಸಪ್ನಾ ಸುರೇಶ್ ಯುಎಇ ದೂತಾವಾಸದ ಪ್ರತಿನಿಧಿಯಾಗಿ ಪರಿಚಿತ ಮುಖ. ಆದರೆ ಅಪರಾಧ ಹಿನ್ನೆಲೆಯ ಬಗ್ಗೆ ತಿಳಿದ ಬಳಿಕ ಆಕೆಯನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಲಾಗಿಲ್ಲ. ಕೆ ಸುರೇಂದ್ರನ್ ಸೇರಿದಂತೆ ಆರೋಪಗಳನ್ನು ಮಾಡಿದವರ ವಿರುದ್ಧ ಕಾನೂನು ಕ್ರಮಗಳನ್ನು ಪರಿಗಣಿಸಬೇಕಾಗುತ್ತದೆ. ಕೇಂದ್ರ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿರುವುದರಿಂದ, ಅದನ್ನು ಪರಿಗಣಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು 'ಎಂದು ಶ್ರೀರಾಮಕೃಷ್ಣನ್ ಹೇಳಿದರು.