ಕೊಚ್ಚಿ: ಕೋವಿಡ್ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದೆ. ಗುರುವಾರ, ವಿಪತ್ತು ನಿರ್ವಹಣಾ ಇಲಾಖೆಯು ಕಠಿಣ ನಿಲುವು ವ್ಯಕ್ತಪಡಿಸಿದ್ದು ಜನರನ್ನು ಒಳಗೊಂಡ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶಿಸಿದೆ. ಎಲ್ಲಾ ಆಚರಣೆಗಳನ್ನು ರಾತ್ರಿ 10 ಗಂಟೆಯ ವರೆಗೆ ಅನುಮತಿಸಲಾಗಿದೆ. ಆಚರಣೆಗಳು ನಡೆಯಬೇಕಾದರೆ, ಅದು ಕೋವಿಡ್ ನಿಯಮಗಳನ್ನು ಪಾಲಿಸಿರಬೇಕು.ಮಾಸ್ಕ್, ಸ್ಯಾನಿಟೈಜರ್‍ಗಳು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಇವುಗಳನ್ನು ಜಾರಿಗೆ ತರಲು ಸರ್ಕಾರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ. ದೇಶದಲ್ಲಿ ಕೋವಿಡ್‍ನ ಹೊಸ ರೂಪಾಂತರದ ದೃಢೀಕರಣದ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಕಟ್ಟುನಿಟ್ಟಿನ ನಿರ್ಬಂಧ ಹೇರುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿತ್ತು. ಡಿಸೆಂಬರ್ 30 ಮತ್ತು ಜನವರಿ 1 ರಂದು ನಿಬರ್ಂಧಗಳನ್ನು ವಿಧಿಸುವುದು ಕೇಂದ್ರದ ಪ್ರಸ್ತಾಪವಾಗಿತ್ತು.
ಡಿಸೆಂಬರ್ 31 ರಿಂದ ಜನವರಿ 4 ರವರೆಗೆ ಕಡಲತೀರಗಳಿಗೆ ಪ್ರವೇಶ ವೀಕ್ಷಣೆ ಸಹಿತ ಮೋಜಿನ ಚಟುವಟಿಕೆಗಳು ಸಂಜೆ 6 ಗಂಟೆಗೆ ಸೀಮಿತವಾಗಿದೆ.