ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿದ ಎಲ್ಲ ಜನ ಪ್ರತಿನಿಧಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ಸೋಮವಾರ ನಡೆಯಿತು. ಪ್ರಮಾಣವಚನ ಸ್ವೀಕಾರವನ್ನು ಜನಪ್ರತಿನಿಧಿಗಳು ವಿವಿಧ ರೀತಿಯಲ್ಲಿ ನಡೆಸಿದರು. ಇದು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.
ತಿರುವನಂತಪುರಂನ ಕರಮನ ವಿಭಾಗದಿಂದ ಗೆದ್ದ ಬಿಜೆಪಿ ಅಭ್ಯರ್ಥಿ ಮಂಜು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನವನ್ನು ಸಂಸ್ಕೃತದಲ್ಲಿ ಬರೆದು ಓದಲಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮಂಜು ಅವರ ಪ್ರಮಾಣವಚನ ಸಂಸ್ಕೃತವನ್ನು ಮಲಯಾಳಂ ಲಿಪಿಯಲ್ಲಿ ಬರೆಯಲಾಗಿದೆ ಎಂದು ತಿಳಿದುಬಂದಿದೆ. ಅದರ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವು.
ತಿರುವನಂತಪುರಂನಲ್ಲಿ ಅಭ್ಯರ್ಥಿಯೋರ್ವ ಅಯ್ಯಪ್ಪ ಸ್ವಾಮಿಯ ಹೆಸರಿನ ಪ್ರಮಾಣವಚನ ಕೂಡ ಗಮನ ಸೆಳೆಯಿತು. ಬಿಜೆಪಿ ಸದಸ್ಯೆ ಕರಮನ ಅಜಿತ್ ಅವರು ಅಯ್ಯಪ್ಪಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕರಮಣ ಅಜಿತ್ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ನೆಡುಂಕಡ್ ವಾರ್ಡ್‍ನಿಂದ ಜಯಗಳಿಸಿರುವರು. ಫೆÇೀರ್ಟ್ ವಾರ್ಡ್‍ನ ಸ್ವತಂತ್ರ ಬಿಜೆಪಿ ಸದಸ್ಯ ಜಾನಕಿ ಅಮ್ಮಾಳ್ ಅವರು ಪದ್ಮನಾಭಸ್ವಾಮಿ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ತ್ರಿಶೂರ್ ಕೊಂಡಾಳಿ ಪಂಚಾಯತ್‍ನಲ್ಲಿ ಸಿಪಿಐ (ಎಂ) ಅಭ್ಯರ್ಥಿ ಸುತ್ತಿಗೆ ಮತ್ತು ಕುಡಗೋಲು ಚಿಹ್ನೆಯನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದರು. ಕೊಂಡಾಳಿ ಪಂಚಾಯತ್‍ನ ಮೂತೇದತುಪಾಡಿ ವಾರ್ಡ್‍ನಲ್ಲಿ ಗೆದ್ದ ಸಿಪಿಐ (ಎಂ) ಅಭ್ಯರ್ಥಿ ರಾಧಯ ಈ ರೀತಿಯಲ್ಲಿ ಗಮನ ಸೆಳೆದರು. ಇದು ಪ್ರಮಾಣವಚನ ಉಲ್ಲಂಘನೆ ಎಂದು ಬಿಜೆಪಿ ಆರೋಪಿಸಿದೆ.