ತ್ರಿಶೂರ್: ಕೋವಿಡ್ ನಿಬಂಧನೆಗಳ ಭಾಗವಾಗಿ ಕಳೆದ ಎಂಟು ತಿಂಗಳಿನಿಂದ ಭಕ್ತರಿಗೆ ಮುಚ್ಚಿದ್ದ ಗುರುವಾಯೂರ್ ದೇವಸ್ಥಾನದ ನಾಲಂಬಲಂ ಪ್ರವೇಶವನ್ನು ಮಂಗಳವಾರದಿಂದ ಪುನರಾರಂಭಿಸಲಾಗಿದೆ. 4,000 ಜನರಿಗೆ ಭೇಟಿ ನೀಡಲು ಅವಕಾಶವಿದ್ದರೂ, ಅರ್ಧಕ್ಕಿಂತ ಕಡಿಮೆ ಜನರು ಮಾತ್ರ ನಿನ್ನೆ ಭೇಟಿ ನೀಡಿದ್ದರು. ಇಂದಿನಿಂದ 100 ವಿವಾಹಗಳಿಗೆ ಅವಕಾಶ ನೀಡಲಾಗುವುದು. ಇಂದು, 28 ವಿವಾಹಗಳನ್ನು ಕಾಯ್ದಿರಿಸಲಾಗಿದೆ.
ದೇವರ ದರ್ಶನಕ್ಕಾಗಿ ಭಕ್ತರಿಗೆ ಪ್ರವೇಶಾನುಮತಿ ನೀಡುವುದರೊಂದಿಗೆ ದೈನಂದಿನ ಸೇವಾ ವಿಧಿಗಳು ಆರಂಭಗೊಂಡವು. ನಾಲಂಬಲಂನ ಪ್ರಾರ್ಥನಾ ಮಂದಿರದ ಮುಂಭಾಗದಿಂದ ವೀಕ್ಷಿಸಲು ಅನುಮತಿ ನೀಡಲಾಗಿದೆ. ಗರ್ಭ ಗೃಹದ ಮೆಟ್ಟಿಲುಗಳ ಬಳಿಗೆ ಪ್ರವೇಶಿಸಲು ಅನುಮತಿ ನೀಡಲಾಗಿಲ್ಲ. ಕೋವಿಡ್ ಲಾಕ್ ಡೌನ್ ಆರಂಭಗೊಳ್ಳುತ್ತಿರುವಂತೆಯೇ ಗುರುವಾಯೂರ್ ಮಾರ್ಚ್ 14 ರಿಂದ ಪ್ರವೇಶ ನಿಷೇಧಿಸಲ್ಪಟ್ಟಿತು. ಬಳಿಕ ನಿಯಂತ್ರಣಗಳನ್ನು ಹಲವು ಬಾರಿ ಸಡಿಲಿಸಲಾಯಿತು, ಆದರೆ ಒಳಾಂಗಣ ಪ್ರವೇಶವಿರಲಿಲ್ಲ.
ಸೋಮವಾರ ಸಭೆ ಸೇರಿದ್ದ ದೇವಸ್ವಂ ಆಡಳಿತ ಮಂಡಳಿ ನಾಲಂಬಲಂ ಭೇಟಿಗೆ ಅನುಮತಿ ನೀಡಲು ನಿರ್ಧರಿಸಿತು. ಪೂರ್ವ ಗೋಪುರದ ಮೂಲಕ ಪರಿಧಿಗೆ ಪ್ರವೇಶಿಸುವ, ಅಯ್ಯಪ್ಪ ಪ್ರದಕ್ಷಿಣೆ ಮಾಡುವ, ದೀಪಸ್ತಂಭದ ಬಳಿಯಿರುವ ಸಾಲಿನ ಮೂಲಕ ನಾಲಂಬಲಂಗೆ ಪ್ರವೇಶಿಸುವ, ಪ್ರಾರ್ಥನಾ ಮಂದಿರದ ಮುಂದೆ ಹೊರಬಂದು ಉತ್ತರ ದ್ವಾರದ ಮೂಲಕ ಗುರುವಾಯೂರಪ್ಪನ್ ಮತ್ತು ಗಣಪತಿ ದೇವರನ್ನು ಸಂಪ್ರಾರ್ಥಿಸಿ ನಿರ್ಗಮಿಸುವ ರೀತಿಯಲ್ಲಿ ದರ್ಶನ ವ್ಯವಸ್ಥೆ ಮಾಡಲಾಗಿದೆ.