ಕಾಸರಗೋಡು: ಜಿಲ್ಲಾ ಪಂಚಾಯತ್ ಸದಸ್ಯರ ಪದಗ್ರಹಣ ಸಮಾರಂಭ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು.ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹಿರಿಯ ಸದಸ್ಯೆ ಗೀತಾಕೃಷ್ಣನ್‍ಅವರಿಗೆ ಪ್ರತಿಜ್ಞೆ ತಿಳಿಸಿಕೊಟ್ಟರು. ನಂತರ ಗೀತಾಕೃಷ್ಣನ್ ಅವರು ಪ್ರಥಮ ವಿಭಾಗ(ವರ್ಕಾಡಿ)ದಿಂದ 17ನೇ ಡಿವಿಜನ್(ಮಂಜೇಶ್ವರ) ವರೆಗೆ ಆಯ್ಕೆಗೊಂಡಿರುವ ಸದಸ್ಯರಿಗೆ ಪ್ರತಿಜ್ಞೆ ಬೋಧಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಹೂಗುಚ್ಛ ನೀಡಿ ನೂತನ ಸದಸ್ಯರನ್ನು ಬರಮಾಡಿಕೊಂಡರು.
ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ನಂದಕುಮಾರ್, ಶಾಸಕ ಎನ್.ಎ.ನೆಲ್ಲಿಕುನ್ನು, ಮಾಜಿ ಸಂಸದ ಪಿ.ಕರುಣಾಕರನ್, ವಿವಿಧ ರಾಜಕೀಯ ಪಕ್ಷಗಳ ನೇತಾರರು ಉಪಸ್ಥಿತರಿದ್ದರು.
ನಂತರ ಜಿಲ್ಲಾ ಪಂಚಾಯತ್ ನೂತನ ಸದಸ್ಯರ ಪ್ರಥಮ ಸಭೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಹಿರಿಯ ಸದಸ್ಯೆ ಗೀತಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ನ ನೂತನ ಅಧ್ಯಕ್ಷರ ಆಯ್ಕೆ ಡಿ.30ರಂದು ಬೆಳಗ್ಗೆ 11 ಗಂಟೆಗೆ, ಉಪಾಧ್ಯಕ್ಷರ ಆಯ್ಕೆ ಅಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.