ಪಥನಂತಿಟ್ಟ: ದೇವರ ಹೆಸರಿಗೆ ಬರೆದ ಪತ್ರಗಳನ್ನು ತಲುಪಿಸಲು ಅಂಚೆ ಕಚೇರಿ ಎಂಬ ಹೆಗ್ಗಳಿಕೆ ಹೊಂದಿರುವ ಶಬರಿಮಲೆ ಅಂಚೆಕಚೇರಿ ಈ ಚಳಿಗಾಲದಲ್ಲೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.
ಇಡೀ ವರ್ಷದಲ್ಲಿ ಚಳಿಗಾಲದಲ್ಲಿ ಮಾತ್ರ ಕಚೇರಿ ಕಾರ್ಯ ನಿರ್ವಹಿಸುವ, ದೇವರಿಗೆ ಪತ್ರ ತಲುಪಿಸುವ ಕಚೇರಿ ಎಂದೇ ಖ್ಯಾತಿ ಗಳಿಸಿದ ಈ ಕಚೇರಿ ಜನಪ್ರಿಯತೆ ಗಳಿಸಿದ್ದು 2014ರಲ್ಲಿ ಎನ್ನಬಹುದು. ಕಚೇರಿ ನಿರ್ವಹಣೆ ಅವಧಿ ಬಗ್ಗೆ ಚಳಿಗಾಲ ಹಾಗೂ ಮಲಯಾಳಿಗಳ ಹೊಸವರ್ಷದ ಅವಧಿಯಲ್ಲಿ ಮಾತ್ರ.
ನವೆಂಬರ್ ಮೊದಲ ವಾರದಿಂದ ಜನವರಿ ಮಧ್ಯಾವಧಿವರೆಗೆ. ಇದರ ಜೊತೆಗೆ ವಿಶು ಅವಧಿಯಲ್ಲಿ 10 ದಿನವಷ್ಟೇ ಕಾರ್ಯನಿರ್ವಹಿಸುತ್ತದೆ. ಅದು ವಾರದಲ್ಲಿ 6 ದಿನ ಮಾತ್ರ ಕಚೇರಿ ಓಪನ್ ಇರುತ್ತದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಚೇರಿಯಲ್ಲಿರುವ 6 ಜನ ಸಿಬ್ಬಂದಿ ನಿಷ್ಠೆಯಿಂದ ತಮ್ಮ ಕಾರ್ಯ ನಿರ್ವಹಿಸುತ್ತಾರೆ.
ನವೆಂಬರ್ 15 ರಿಂದ ಮತ್ತೆ ಮಂಡಲ ಪೂಜಾ ಮಹೋತ್ಸವದ ನಿಮಿತ್ತ ತೆರೆಯಲಾಗುತ್ತದೆ. ಡಿಸೆಂಬರ್ 27ಕ್ಕೆ ಬಾಗಿಲು ಮುಚ್ಚಲಾಗುತ್ತದೆ. ನಂತರ ಡಿಸೆಂಬರ್ 30ಕ್ಕೆ ಬಾಗಿಲು ತೆರೆದು ಜನವರಿ 15ರ ಮಕರ ಸಂಕ್ರಾಂತಿಯ ಜ್ಯೋತಿ ದರ್ಶನದ ತನಕ ಸೀಮಿತ ಭಕ್ತಾದಿಗಳಿಗೆ ಅವಕಾಶವಿರಲಿದೆ. ಈ ಅವಧಿಯಲ್ಲಿ ಇಲ್ಲಿನ ಅಂಚೆ ಕಚೇರಿ ಕಾರ್ಯ ನಿರ್ವಹಿಸಲಿದ್ದು, ದೇವರ ಹೆಸರಿಗೆ ಬರುವ ಪತ್ರಗಳನ್ನು ಸನ್ನಿಧಾನಕ್ಕೆ ಅರ್ಪಿಸಲಾಗುತ್ತದೆ.
ಭಕ್ತಾದಿಗಳು ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮ ವಿಧಿಸಲಾಗಿದೆ. ಒಂದು ವೇಳೆ ನೆಗಟಿವ್ ಪ್ರಮಾಣ ಪತ್ರ ಹೊಂದಿರದಿದ್ದರೆ, ನಿಲಕ್ಕಲ್ ಪ್ರವೇಶ ದ್ವಾರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ತೆರಳಿ ಆಂಟಿಜನ್ ಪರೀಕ್ಷೆ ಮಾಡಿಸಿಕೊಂಡು ಯಾವುದೇ ಸಮಸ್ಯೆ ಇಲ್ಲದಿದ್ದರೆ ಮಾತ್ರ ಸನ್ನಿಧಾನಂ ಬಳಿ ಬರಬಹುದಾಗಿದೆ. ತಿಂಗಳ ಪೂಜೆಗೆ 60 ವರ್ಷ ಮೇಲ್ಪಟ್ಟ ಮಾಲೆಧಾರರಿಗೆ ಅವಕಾಶ ನಿರ್ಬಂಧಿಸಲಾಗಿದೆ.
ಅಂಚೆ ಕಚೇರಿ, ಶಬರಿಮಲೆ ಅಯ್ಯಪ್ಪ ದೇವಾಲಯ ಪೆರುನಾಡ್ ಗ್ರಾಮ ಪಂಚಾಯತ್ ಪತ್ತನಂತಿಟ್ಟ ಜಿಲ್ಲೆ ಕೇರಳ ಭಾರತ- 689662 ಹೆಚ್ಚಿನ ಮಾಹಿತಿಗೆ, ಪ್ರವಾಸಿ ಪ್ಯಾಕೇಜ್ ಬುಕ್ ಮಾಡಿಕೊಳ್ಳಲು ದೇಗುಲದ ಅಧಿಕೃತ ವೆಬ್ ತಾಣ ಕ್ಲಿಕ್ ಮಾಡಿ