ತೆಂಜಿಪಾಲಂ: ನಿನ್ನೆಯಷ್ಟೇ ಗ್ರಾ.ಪಂ.ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದ ಪಂಚಾಯತಿ ಅಧ್ಯಕ್ಷರೋರ್ವರು ಅಧಿಕಾರದ ಗದ್ದುಗೆಗೇರಿದ ಗಂಟೆಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಸಿದೆ. ತೆಂಜಿಪಾಲಂ ಗ್ರಾ.ಪಂ. ಅಧ್ಯಕ್ಷ ಟಿ.ವಿಜಿತ್ (33) ಆತ್ಮಹತ್ಯೆಗೆ ಯತ್ನಿಸಿದ್ದು ಗಂಭೀರ ಸ್ಥಿತಿಯಲ್ಲಿ ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದು ಆತ್ಮಹತ್ಯಾ ಪ್ರಯತ್ನ ಎಂದು ಹೇಳಲಾಗಿದೆ. ಕಾರಣ ಸ್ಪಷ್ಟವಾಗಿಲ್ಲ. ನಿನ್ನೆ ತುಂಬಾ ಸಂತೋಷವಾಗಿದ್ದರು ಎಂದು ಅವರೊಂದಿಗೆ ಇದ್ದವರು ಹೇಳಿಕೆ ನೀಡಿದ್ದಾರೆ. ಮೀಸಲು ಸ್ಥಾನದ ಅಧ್ಯಕ್ಷರಾಗಿ ಅವರು ಗದ್ದುಗೆಗೆ ಏರಿದ್ದರು. ತೆಂಜಿಪಾಲಂ ಪಂಚಾಯತಿಯ 11 ನೇ ವಾರ್ಡ್ ಮುಸ್ಲಿಂ ಲೀಗ್ ಪಕ್ಷದಿಂದ ಸ್ಪರ್ಧಿಸಿದ್ದರು.
ಆರಂಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು ಮತ್ತು ಬಳಿಕ ಗಂಭೀರ ಸ್ಥಿತಿ ಉಂಟಾದ್ದರಿಂದ ತಜ್ಞರ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.