HEALTH TIPS

ವಿದ್ಯಾರ್ಥಿಗಳು ಸುಲಲಿತರಾಗಿ ಕಲಿಯಬಹುದು: ಫಸ್ಟ್ ಬೆಲ್ ತರಗತಿಗಳ ಕ್ರಮೀಕರಣ ಹೊರೆಯಾಗದ ರೀತಿಯಲ್ಲಿದೆ-ಕೈಟ್

                    

        ತಿರುವನಂತಪುರ: ಕೈಟ್ ವಿಕ್ಟರ್ಸ್ ಮೂಲಕ ಪ್ರಸಾರವಾಗುತ್ತಿರುವ ಫಸ್ಟ್ ಬೆಲ್ ಡಿಜಿಟಲ್ ತರಗತಿಗಳನ್ನು ಮಕ್ಕಳು ಸುಲಲಿತರಾಗಿ ಕಲಿಯುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕೈಟ್ ವಿಕ್ಟರ್ಸ್ ಅಧಿಕಾರಿಗಳು ತಿಳಿಸಿದ್ದಾರೆ. 10 ಮತ್ತು 12 ನೇ ತರಗತಿಗಳನ್ನು ಕೇಂದ್ರೀಕರಿಸಿ ಪ್ರಸ್ತುತ ಪ್ರಸಾರವಾಗುತ್ತಿರುವ ಡಿಜಿಟಲ್ ತರಗತಿಗಳು ಡಿಸೆಂಬರ್ 7 ರಿಂದ ಹೆಚ್ಚಿನ ಅವಧಿಯ ತರಗತಿಗಳು ಪ್ರಸಾರವಾಗುತ್ತಿರುವ ಬಗ್ಗೆ ಕೆಲವು ಆತಂಕಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮಕ್ಕಳಿಗೆ ಹೆಚ್ಚು ಹೊರೆಯಾಗದಂತೆ ತರಗತಿಗಳನ್ನು ತಯಾರುಗೊಳಿಸುವ ಸಾರ್ವಜನಿಕ ವಿದ್ಯಾಭ್ಯಾಸ ಇಲಾಖೆಯ ನಿರ್ದೇಶಾನುಸಾರ ಕೈಟ್ ಎಸ್.ಸಿ.ಇ.ಆರ್.ಟಿ. ಯು ತರಗತಿಗಳನ್ನು ಸಿದ್ದಪಡಿಸಿ ಪ್ರಸಾರ ಮಾಡುತ್ತಿದೆ.   

      ಅದರಂತೆ, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅಂಗೀಕೃತ ಸಮಯಕ್ಕೆ ಅನುಗುಣವಾಗಿ ತರಗತಿ ಪಠ್ಯಗಳನ್ನು ಪೂರ್ಣಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಜನವರಿಯಲ್ಲಿ  ಫಸ್ಟ್ ಬೆಲ್ ತರಗತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು.  ಸುಮಾರು ಅರ್ಧದಷ್ಟು ವಿಷಯಗಳಲ್ಲಿ ತರಗತಿಗಳು ಜನವರಿ ಮೊದಲ ವಾರದಲ್ಲಿ ಪೂರ್ಣಗೊಳ್ಳುತ್ತವೆ. ಹನ್ನೆರಡನೇ ತರಗತಿಯ ಕೆಲವು ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಸಮಯ ಬೇಕಾಗಬಹುದು. ವಿದ್ಯಾರ್ಥಿಗಳು ದಿನಕ್ಕೆ ಗರಿಷ್ಠ ಎರಡೂವರೆ ಗಂಟೆಗಳ ಡಿಜಿಟಲ್ ತರಗತಿಗಳ ಅಗತ್ಯವಿರಬಹುದು, ವಿರಳವಾಗಿ ದಿನಕ್ಕೆ ಮೂರು ಗಂಟೆಗಳವರೆಗೂ ನಡೆಸಬೇಕಾಗಬಹುದು. ಫಸ್ಟ್‍ಬೆಲ್ ಪೆÇೀರ್ಟಲ್ (ಜಿiಡಿsಣbeಟಟ.ಞiಣe.ಞeಡಿಚಿಟಚಿ.gov.iಟಿ) ಎಲ್ಲಾ ತರಗತಿಗಳ ಮರು ಪ್ರಸಾರಗಳೊಂದಿಗೆ ವೀಕ್ಷಣೆಗೆ ಲಭ್ಯವಿದೆ.

        ವಿದ್ಯಾರ್ಥಿಗಳ ಮೇಲೆ ಎಂದಿಗೂ ಒತ್ತಡ ಹೇರದ ರೀತಿಯಲ್ಲಿ ತರಗತಿಗಳನ್ನು ಆಯೋಜಿಸಲಾಗಿದೆ. ಫಸ್ಟ್ ಬೆಲ್ ತರಗತಿಗಳನ್ನು ವೀಕ್ಷಿಸುವ ಮೂಲಕ ಮಾತ್ರ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸುವ ಉದ್ದೇಶವನ್ನು ಈ ಪ್ರಸಾರ ಹೊಂದಿಲ್ಲ. ಪ್ರಸ್ತುತ ಶಿಕ್ಷಕರು ಒದಗಿಸುವ ನೇರ ಬೆಂಬಲದ ಜೊತೆಗೆ, ಮಕ್ಕಳು ಶಾಲೆಗೆ ಬಂದು ನೇರವಾ ಶಿಕ್ಷಕರಿಂದ ತರಗತಿಗಳನ್ನು ಅನುಭವಿಸುವ ರೀತಿಯ ನಿರೀಕ್ಷೆಯೊಂದಿಗೆ ಫಸ್ಟ್‍ಬೆಲ್‍ನ ಚಟುವಟಿಕೆಗಳನ್ನು ಕಲ್ಪಿಸಲಾಗಿದೆ. ಸಾಮಾನ್ಯ ಪರೀಕ್ಷೆಗೆ ಮುಖ್ಯವಾದ ಭಾಗಗಳನ್ನು ಸೇರಿಸುವ ಮೂಲಕ ತರಗತಿಗಳನ್ನು ನೀಡಲಾಗುತ್ತದೆ. ಡಿಸೆಂಬರ್ 18 ರಿಂದ ಪ್ಲಸ್ ಟು ವಿದ್ಯಾರ್ಥಿಗಳ ಪ್ರಥಮ ವರ್ಷದ ಪೂರಕ ಪರೀಕ್ಷೆಯ ದಿನಗಳಲ್ಲಿ ಹನ್ನೆರಡನೇ ತರಗತಿಗೆ ಫಸ್ಟ್‍ಬೆಲ್ ತರಗತಿಗಳು ಇರುವುದಿಲ್ಲ. ಅದೇ ರೀತಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಡಿಸೆಂಬರ್ 24 ರಿಂದ 27 ರವರೆಗೆ ತರಗತಿಗಳು ಇರುವುದಿಲ್ಲ. ಪರಿಷ್ಕøತ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries