ಕಾಸರಗೋಡು: ಕೋವಿಡ್ ಕಾಲಾವಧಿಯಲ್ಲಿ ರೋಗನಿಯಂತ್ರಣ ಹಾಗೂ ಚಿಕಿತ್ಸೆಯಲ್ಲಿ ಅತ್ಯುತ್ತಮ ಸೇವೆ ನೀಡಿದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ)ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಡಾ. ಜನಾರ್ದನ ನಾಯ್ಕ್ ಅವರಿಗೆ ಐಎಂಎ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ. ಆನ್‍ಲೈನ್ ಸಮಾರಂಭದಲ್ಲಿ ಐಎಂಎ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ. ರಾಜನ್ ಶರ್ಮ ಪುರಸ್ಕಾರ ಪ್ರದಾನ ಮಾಡಿದರು.
ಕೇರಳ ರಾಜ್ಯದ ಹತ್ತು ಮಂದಿ ವಐದ್ಯರನ್ನು ಈ ವಿಶೇಷ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಡಾ. ಜನಾರ್ದನ ನಾಯ್ಕ್ ಕಾಸರಗೋಡಿನ ಏಕ ಸದಸ್ಯರಾಗಿದ್ದಾರೆ. ಏಡ್ಸ್ ನಿಯಂತ್ರಣದಲ್ಲಿ ಡಾ. ಜನಾರ್ದನ ನಾಯ್ಕ್ ಅವರ ಸೇವೆ ಪರಿಗಣಿಸಿ ಐದು ಪುರಸ್ಕಾರ ಲಭಿಸಿದೆ. ಇವರು ರೋಟರಿ ಕ್ಲಬ್ ಜಿಲ್ಲಾ ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.