ಕಾಸರಗೋಡು: ಪರಪ್ಪ ಶಾಲೆಯ ಮತಗಟ್ಟೆಯಲ್ಲಿ ಚುನಾವಣಾ ಕಾರ್ಯದ ಅಂಗವಾಗಿ ರೂಟ್ ಆಫೀಸರ್(ಮಾರ್ಗ ನಿರ್ವಹಣಾಧಿಕಾರಿ) ಶಂಸುದ್ದೀನ್ ಮಲ್ಲಂ ಎಲ್ಲರ ಗಮನ ಕೇಂದ್ರೀಕರಿಸುವ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ.
ಕೇವಲ 110 ಸೆಂ.ಮೀ ಎತ್ತರವಿರುವ ಶಂಸುದ್ದೀನ್‍ಗೆ ಕೆಲಸದಲ್ಲಿ ಯಾವುದೇ ಮಿತಿಗಳಿಲ್ಲ. ಕೋವಿಡ್ ಜಾಗ್ರತೆಯೊಂದಿಗೆ ಪ್ರತಿ ಮತದಾನ ಕೇಂದ್ರಕ್ಕೆ ಅಧಿಕಾರಿಗಳನ್ನು ಎಚ್ಚರಿಕೆಯಿಂದ ತಲುಪಿಸುವ ಕಾರ್ಯದಲ್ಲಿ ಇವರು ಯಶಸ್ವಿಯಾಗಿದ್ದಾರೆ. ಬಳಾಲ್ ಪಂಚಾಯತ್ ನಲ್ಲಿ ಮತ ಎಣಿಕೆ ಮಾಡಿದ ಬಳಿಕ ಡಿ.16 ರಂದು ಶಂಸುದ್ದೀನ್ ಅವರ ಮೊದಲ ಚುನಾವಣಾ ಕರ್ತವ್ಯ ಪೂರ್ಣಗೊಳ್ಳಲಿದೆ.
ಶಂಸುದ್ದೀನ್ ಒಂದು ವರ್ಷದಿಂದ ಪನತ್ತಡಿ ಗ್ರಾಮ ಪಂಚಾಯಿತಿಯ ಗುಮಾಸ್ತರಾಗಿದ್ದಾರೆ. ಇವರು ಮುಳಿಯಾರ್ ಮೂಲದವರು. ವಿಶೇಷವಾಗಿ ಪುಟ್ಟ ದೇಹದ ಇವರು ಎಲ್ಲರನ್ನೂ ಚಕಿತಗೊಳಿಸಿದ್ದು ನಿಜ.