ಕೋಝಿಕ್ಕೋಡ್: ಯಾತ್ರಿಕರಿಗೆ ಶಬರಿಮಲೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಕೊಲತ್ತೂರ್ ಅದ್ವೈತ ಆಶ್ರಮದ ಮುಖ್ಯಸ್ಥ ಶ್ರೀಸ್ವಾಮಿ ಚಿದಾನಂದಪುರಿ ಹೇಳಿದ್ದಾರೆ. ಶಬರಿಮಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಹರಡುವಿಕೆ ಆತಂಕಕಾರಿಯಾಗಿದೆ ಎಂದು ಸ್ವಾಮಿ ಚಿದಾನಂದಪುರಿ ಹೇಳಿದರು.
ನಿಬಂಧನೆಗಳೊಂದಿಗೆ ಭಕ್ತರಿಗೆ ಶಬರಿಮಲೆಗೆ ಪ್ರವೇಶಿಸಲು ಅವಕಾಶ ನೀಡುವ ನಿರ್ಧಾರವನ್ನು ಸರ್ಕಾರ ಮತ್ತು ದೇವಸ್ವಂ ಮಂಡಳಿ ಮರುಪರಿಶೀಲಿಸಬೇಕು. ಕೋವಿಡ್ ಅವಧಿಯಲ್ಲಿ ಕ್ಷೇತ್ರದ ತೀರ್ಥಯಾತ್ರೆಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡ ನಿರ್ಧಾರವು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ ಎಂದು ಸ್ವಾಮಿ ಚಿದಾನಂದಪುರಿ ಹೇಳಿರುವರು.