ಎರ್ನಾಕುಳಂ: ಬಾಯ್ಲರ್ ಕೋಳಿಯ ಬೆಲೆಯಲ್ಲಿ ಅನಿಯಂತ್ರಿತ ಹೆಚ್ಚಳವನ್ನು ತಡೆಯಲು ಮತ್ತು ಗ್ರಾಹಕರಿಗೆ ಗುಣಮಟ್ಟದ ಕೋಳಿ ಒದಗಿಸಲು ಕೇರಳ ಸರ್ಕಾರ ಪ್ರಾರಂಭಿಸಿರುವ ಕೇರಳ ಚಿಕನ್ ಯೋಜನೆಯು ಕುಟುಂಬಶ್ರೀ ಎರ್ನಾಕುಳಂ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಇಂದು(ಡಿಸೆಂಬರ್ 23 ರ ಬುಧವಾರ) ಪೆರುಂಪಿಲ್ಲಿನಾಡ-ಮಟ್ಟತ್ತಕಡವು ರಸ್ತೆಯ ಕೂನಪ್ಪಿಲ್ ಕಟ್ಟಡದಲ್ಲಿ ಆರಂಭಗೊಳ್ಳಲಿದೆ.
ಮುಲಾಂತುರುತಿ ಪಂಚಾಯತ್‍ನಲ್ಲಿ ಕೇರಳ ಚಿಕನ್‍ನ ಮೊದಲ ಔಟ್‍ಲೆಟ್ ಇದಾಗಿದೆ. ರಾಜ್ಯದೊಳಗಿನ ಶೇ.50 ದೇಶೀಯ ಮಾರುಕಟ್ಟೆ ಬ್ರಾಯ್ಲರ್‍ಗಳನ್ನು ಉತ್ಪಾದಿಸುವ ಮತ್ತು ಮಾರಾಟ ಮಾಡುವ ಈ ಯೋಜನೆಯನ್ನು ಕುಟುುಂಬಶ್ರೀ ಸಹಯೋಗದೊಂದಿಗೆ ಪಶುಸಂಗೋಪನಾ ಇಲಾಖೆ ಮತ್ತು ಕೇರಳ ರಾಜ್ಯ ಕೋಳಿ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಜಾರಿಗೆ ತರಲಾಗುತ್ತಿದೆ.
ಮುಲಾಂತುರುತಿಯಲ್ಲಿರುವ ಕೇರಳ ಚಿಕನ್ ಔಟ್‍ಲೆಟ್ ನ್ನು ಇಂದು(ಬುಧವಾರ) ಬೆಳಿಗ್ಗೆ 9.45 ಕ್ಕೆ ಮುಲಾಂತುರುತಿ ಪಂಚಾಯತಿ ಸದಸ್ಯರಾದ ಅತಿರಾ ಸುರೇಶ್ ಮತ್ತು ಜಾರ್ಜ್ ಮಣಿ ಉದ್ಘಾಟಿಸುವರು ಎಂದು ನವಲಕ್ಷ್ಮಿ ಕುಟುಂಬಶ್ರೀ ಕಾರ್ಯದರ್ಶಿ ಗಿರಿಜಾ ಮೋಹನನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.