ಕೋದಮಂಗಲಂ: ವಾರ್ಡ್ ಸದಸ್ಯರೊಬ್ಬರು ಪ್ರಮಾಣ ವಚನ ಸ್ವೀಕರಿಸಿದ ನಾಲ್ಕೇ ಗಂಟೆಯಲ್ಲಿ ಭರವಸೆ ಈಡೇರಿಸಿ ಮಾದರಿಯಾದ ಘಟನೆ ನಡೆದಿದೆ. ಕೋದಮಂಗಲಂನ ನೆಲ್ಲಿಕುಳಿ ಪಂಚಾಯತ್‍ನ 13 ನೇ ವಾರ್ಡ್‍ನಿಂದ ಆಯ್ಕೆಯಾದ ಎಲ್‍ಡಿಎಫ್ ಪ್ರತಿನಿಧಿ ಪಿಎಂ ಮಜೀದ್ ಅವರು ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ತಮ್ಮ ಪ್ರಚಾರದ ವೇಳೆ ನೀಡಿದ್ದ ಭರವಸೆ ಈಡೇರಿಸಿ ಗಮನ ಸೆಳೆದಿರುವರು.
ಪಟ್ಟಲೈಮೋಲ್‍ನಲ್ಲಿ ಕುಡಿಯುವ ನೀರಿನ ಕೊರತೆ ಇದೆ ಎಂಬ ದೂರು ಚುನಾವಣಾ ಪ್ರಚಾರದ ವೇಳೆ ಕೇಳಿಬಂದಿತ್ತು. ಇದನ್ನು ಪರಿಹರಿಸಲಾಗುವುದು ಎಂದು ಮಜೀದ್ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದರು. ಬಾವಿ ನಿರ್ಮಾಣಕ್ಕೆ ಮೂರು ಜನರು ಭೂಮಿ ನೀಡಲು ಮುಂದಾದಾಗ ನೀರಿನ ಕೊರತೆಯನ್ನು ನೀಗಿಸುವ ಕಾರ್ಯವನ್ನು ಚುರುಕುಗೊಳಿಸಲಾಯಿತು.
ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರಕ್ಕಾಗಿ ಮಜೀದ್ ಅವರು 13 ನೇ ವಾರ್ಡ್ ಪರ್ಯಟನೆಗೈಯ್ಯುತ್ತಿದ್ದಾಗ ಅಲ್ಲಿನ ಗೃಹಿಣಿಯರು ಕುಡಿಯುವ ನೀರು ಇಲ್ಲ ಎಂದು ದೂರಿದ್ದರು. ಈ ಪ್ರದೇಶದ ಮೂಲಕ ಕಾಲುವೆ ಸಾಗುತ್ತಿದ್ದರೂ ಕುಡಿಯುವ ನೀರಿಲ್ಲ ಎಂದು ಅವರು ಹೇಳಿದ್ದರು. ಎಲ್‍ಡಿಎಫ್ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಾಗ ಇದು ಮೊತ್ತಮೊದಲಾಗಿ ಪರಿಹಾರ ಕಾಣಲಿದೆ ಎಂದು ಅವರು ಭರವಸೆ ನೀಡಿದರು.
ಇಷ್ಟರಲ್ಲಿ ಮೂವರು ವ್ಯಕ್ತಿಗಳು ಸ್ಥಳಾವಕಾಶ ನೀಡಲು ಮುಂದೆ ಬಂದರು. ಶಮೀರ್, ನಹಾ ಮತ್ತು ಇನ್ನೊಬ್ಬರು ಹೆಸರು ಸೂಚಿಸಲು ನಿರಾಕರಿಸಿದ ವ್ಯಕ್ತಿ ಬಾವಿಗಾಗಿ ಸ್ಥಳವನ್ನು ಒದಗಿಸಿದ್ದಾರೆ. ಕ್ಲೀನರ್‍ಗಳಿಗೆ ಅನುಕೂಲವಾಗುವಂತೆ ಟ್ಯಾಂಕ್ ಸ್ಥಾಪಿಸಲಾಗುವುದು ಎಂದು ಮಜೀದ್ ಹೇಳಿದ್ದಾರೆ.
ಎರ್ನಾಕುಳಂ ಜಿಲ್ಲೆಯ ಎಡಪಂಥೀಯರ ಪ್ರಭಾವಶಾಲಿ ಪ್ರದೇಶಗಳಲ್ಲಿ ನೆಲ್ಲಿಕುಳಿ ಒಂದು. ಕಳೆದ ಪಂಚಾಯತ್ ಚುನಾವಣೆಯಲ್ಲಿ ಎಲ್ಡಿಎಫ್ 21 ಸ್ಥಾನಗಳಲ್ಲಿ 13 ಸ್ಥಾನಗಳನ್ನು ಗೆದ್ದಿದೆ. ಯುಡಿಎಫ್ ಐದು ಮತ್ತು ಎನ್‍ಡಿಎ ಮೂರು ಸ್ಥಾನಗಳನ್ನು ಗೆದ್ದಿದೆ.