HEALTH TIPS

ಕುಸಿದ ಮಹಿಳಾ ಗೋಡೆ!-ಕಮ್ಯುನಿಸ್ಟ್ ನವೋದಯವನ್ನು ಮೂಲೆಗುಂಪಾಗಿಸಿದ ಪಿಣರಾಯಿ ವಿಜಯನ್!!

                          

         ತಿರುವನಂತಪುರ: ಪ್ರಸ್ತುತ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದು ಮುನ್ನಡೆಯುತ್ತಿರುವ ಎಡರಂಗದ ಪಿಣರಾಯಿ ವಿಜಯನ್ ಎಡಪಕ್ಷಗಳ ಇತ್ತೀಚಿನ ಗಟ್ಟಿ ಹೃದಯದ ದಿಟ್ಟ ಮುಖ್ಯಮಂತ್ರಿಯೆಂದೇ ಬಿಂಬಿಸಲ್ಪಟ್ಟ ವ್ಯಕ್ತಿಯಿಂದಲೇ ಅದೇ ಕಮ್ಯುನಿಸಂ ನಿರೀಕ್ಷಿಸಿದಂತೆ ಅವಸಾನದತ್ತ ಸಾಗುತ್ತಿದೆಯೇ ಎಂಬಂತೆ ಭಾಸವಾಗುತ್ತಿದೆ. ನವೋತ್ಥಾನ ಮೌಲ್ಯದ ಸರದಾರನೆಂದೇ ಹೇಳಲ್ಪಟ್ಟ ಕಣ್ಣೂರಿನ ಪಿಣರಾಯಿ ವಿಜಯನ್ ಸಂಪ್ರದಾಯಗಳಿಗೆ ತಿಲಾಂಜಲಿ ನೀಡಿ ಪ್ರಸಿದ್ದ ಯಾತ್ರಾ ಕೇಂದ್ರವಾದ ಶಬರಿಮಲೆಗೆ ಸ್ತ್ರೀಯರಿಗೆ ಮುಕ್ತ ಪ್ರವೇಶ ನೀಡಲು ಅವಕಾಸ ನೀಡಿ ಪಕ್ಷದ ಮೂಲ ಸಿದ್ದಾಂತವಾದಿಗಳ ಮುಕ್ತ ಶ್ಲಾಘನೆಗೊಳಗಾಗಿದ್ದವರು ಇದೀಗ ಹಠಾತ್ ಆಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಕಮ್ಯುನಿಸ್ಟ್ ಸಿದ್ದಾಂತದ ಒಂದು ಹಂತದವರೆಗಿನ ಅಪ್ರಸ್ತುತತೆಯನ್ನು ಒಪ್ಪಿಕೊಂಡಂತಾಗಿದೆ ಎನ್ನದೆ ವಿಧಿಯಿಲ್ಲ!

    ನವೋದಯ ಮೌಲ್ಯಗಳನ್ನು ರಕ್ಷಿಸಲು ತೆರಿಗೆ ಹಣದಿಂದ ಮಹಿಳಾ ಗೋಡೆಯನ್ನು ನಿರ್ಮಿಸಿದವರು ಇದೀಗ ಗೋಡೆಯನ್ನು ಮುರಿದಿದ್ದಾರೆ.  50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶಿಸಲು ಅವಕಾಶ ನೀಡಿದ ಸುಪ್ರ್ರೀಂ ತೀರ್ಪನ್ನು ಬದಿಗಿರಿಸಿ ಈ ಹಿಂದಿನ ಸಂಪ್ರದಾಯಕ್ಕೆ ಮತ್ತೆ ಮರಳುವ ಸೂಚನೆ ನೀಡಲಾಗಿದೆ

       50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಶಬರಿಮಲೆಗೆ ಭೇಟಿ ನೀಡಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ವರ್ಚುವಲ್ ಕ್ಯೂ ಬುಕಿಂಗ್‍ಗಾಗಿ ಪರಿಷ್ಕøತ ಮಾರ್ಗಸೂಚಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ದರ್ಶನ ಅನುಮತಿಸುವುದಿಲ್ಲ ಎಂದು ಹೇಳುತ್ತದೆ.

       ಸಂದರ್ಶಕರ ಸಂಖ್ಯೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಬುಧವಾರ ಸಂಜೆ 5 ಗಂಟೆಗೆ ಹೊಸ ವರ್ಚುವಲ್ ಕ್ಯೂಗಾಗಿ ಬುಕಿಂಗ್ ಪ್ರಾರಂಭವಾಯಿತು. ಸರ್ಕಾರ ತನ್ನ ವೆಬ್‍ಸೈಟ್‍ನಲ್ಲಿನ ಮಾರ್ಗಸೂಚಿಗಳಲ್ಲಿ ಹೊಸ ಮಾನದಂಡ  ಸೇರಿಸಿದೆ.

        ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ, ರಾಜ್ಯ ಸರ್ಕಾರವು ಶಬರಿಮಲೆಗೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರನ್ನು ಪ್ರವೇಶಿಸುವ ಬಗ್ಗೆ ಅನುಕೂಲಕರ ನಿಲುವನ್ನು ತೆಗೆದುಕೊಂಡಿತ್ತು. ಸಂಘ ಪರಿವಾರದ ಸಂಘಟನೆಗಳ ನೇತೃತ್ವದಲ್ಲಿ ಇದರ ವಿರುದ್ಧ ಭಾರಿ ಪ್ರತಿಭಟನೆ ನಡೆಯಿತು. ಆದರೆ ಸರ್ಕಾರ ತನ್ನ ನಿಲುವನ್ನು ಬದಲಾಯಿಸಲು ಸಿದ್ಧರಿರಲಿಲ್ಲ.

       ಶಬರಿಮಲೆ ತೀರ್ಪಿನ ವಿರುದ್ಧ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಪರಿಗಣಿಸುತ್ತಿರುವುದರಿಂದ ಸರ್ಕಾರದ ಈ ನಿರ್ಣಯಕ್ಕೆ ಬಂದಿದೆ ಎನ್ನಲಾಗಿದೆ. ವೆಬ್‍ಸೈಟ್ ಪ್ರಕಾರ, ಕೋವಿಡ್ ಹಿನ್ನೆಲೆ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಶಬರಿಮಲೆ ಕ್ಷೇತ್ರ ದರ್ಶನಕ್ಕೆ ಅನುಮತಿ ಇಲ್ಲವೆನ್ನಲಾಗಿದೆ. 

      ನವೋದಯ ಮೌಲ್ಯಗಳನ್ನು ರಕ್ಷಿಸುವ ಘೋಷಣೆಯಡಿಯಲ್ಲಿ ಮಹಿಳಾ ಗೋಡೆಯನ್ನು ಕಳೆದ 2019ರ ಜನವರಿ 1 ರಂದು ಕಾಸರಗೋಡಿನಿಂದ  ತಿರುವನಂತಪುರಕ್ಕೆ 620 ಕಿ.ಮೀ ರಷ್ಟು ವಿಸ್ತಾರಕ್ಕೆ ಆಯೋಜಿಸುವ ಮೂಲಕ ಕಮ್ಯುನಿಸಂ ನ ಪರಿಕಲ್ಪನೆಗೆ ಆಯಾಮವೊದಗಿಸಿ ಪಿಣರಾಯಿ ಭೇಷ್ ಎನಿಸಿದ್ದರು. ಒಂದು ದಶಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಸಜ್ಜುಗೊಳಿಸಲಾಗಿದೆ ಎಂದು ಸರ್ಕಾರ ಮತ್ತು ಸಂಘಟನಾ ಸಮಿತಿ ಹೇಳಿಕೊಂಡಿತ್ತು. ಆಚರಣೆಯ ರಕ್ಷಣೆಯ ಭಾಗವಾಗಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರನ್ನು ಮತ್ತೆ ಇದೀಗ ಪ್ರವೇಶಿಸುವುದನ್ನು ನಿರ್ಬಂಧಿಸಿರುವುದಾಗಿ ಗೋಡೆ ನಿರ್ಮಿಸಿದ ಮಂದಿ ಮೊನ್ನೆಯ ಇತಿಹಾಸವನ್ನು ಬದಿಗೆ ಸರಿಸಿ ಅದರಾಚೆಗಿನ ಪ್ರಾಚೀನ ಇತಿಹಾಸದತ್ತ ಬೆರಳು ತೋರಿಸಿರುವುದು ಅಮಮ ರಾಜಕೀಯವೇ ಎನಿಸಿದರೂ ತಪ್ಪಾಗಲಾರದು!


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries