ಕಾಸರಗೋಡು: ವಿಧಾನಸಭೆ ಚುನಾವಣೆಯ ಪೂರೌಭಾವಿಯಾಗಿ ನಡೆಯಲಿರುವ ಪ್ರತ್ಯೇಕ ಮತದಾತರ ಪಟ್ಟಿ ನವೀಕರಣ ಅಂಗವಾಗಿ ಚುನಾವಣೆ ಆಯೋಗ ನೇಮಿಸಿರುವ ಮತದಾತರ ಪಟ್ಟಿ ನಿರೀಕ್ಷಕ ಕೆ.ಗೋಪಾಲಕೃಷ್ಣ ಭಟ್ ಅವರು ಮಂಗಳವಾರ ಕಾಸರಗೊಡು ಜಿಲ್ಲೆಗೆ ಆಗಮಿಸಿದರು.
ಮೊದಲ ದಿನ ಮಂಜೇಶ್ವರ, ಕಾಸರಗೋಡು ತಾಲೂಕು ಕಚೇರಿಗಳಿಗೆ ಅವರು ಭೇಟಿ ನೀಡಿದರು. ಮತದಾತರ ಪಟ್ಟಿ ನವೀಕರಣ ಚಟುವಟಿಕೆಗಳ ಪ್ರಗತಿಯ ಅವಲೋಕನ ನಡೆಸಿದರು. ಮಂಜೇಶ್ವರ ತಾಲೂಕು ಕಚೇರಿಗೆ ಅವರು ಭೇಟಿ ನೀಡಿದ ವೇಳೆ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ತಹಸೀಲ್ದಾರ್ ಎಂ.ಜೆ.ಷಾಜಿಮೋನ್, ಚುನಾವಣೆ ವಿಭಾಗ ತಹಸೀಲ್ದಾರ್ ಕಣ್ಣನ್, ಎಡನಾಡು ಗ್ರಾಮಾಧಿಕಾರಿ ಕೆ.ಸತ್ಯನಾರಾಯಣ ತಂತ್ರಿ, ಬಿ.ಎಲ್.ಒ.ಗಳು ಸ್ವಾಗತಿಸಿದರು.
ಎರಡು ದಿನಗಳ ಅವರ ಸಂದರ್ಶನದಲ್ಲಿ ಜಿಲ್ಲೆಯ ವಿವಿಧ ಇಲೆಕ್ಟರಲ್ ರೆಜಿಸ್ಟ್ರೇಷನ್ ಅಧಿಕಾರಿ ಕಚೇರಿಗಳೀಗೆ ಭೆಟಿ ನೀಡಲಿದ್ದಾರೆ. ಡಿ.24ರಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲಧಿಕಾರಿ, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣೆ ವಿಭಾಗದ ಸಿಬ್ಬಂದಿಯೊಂದಿಗೆ ಅವರು ಮಾತುಕತೆ ನಡೆಸುವರು. 2.30ಕ್ಕೆ ಜಿಲ್ಲೆಯ ಸಂಸದ, ಶಾಸಕರು, ಅಂಗೀಕೃತ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಅವರು ಜಿಲ್ಲಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಮಾತುಕತೆ ನಡೆಸುವರು.