ಕಾಸರಗೋಡು: ಕಾಸರಗೋಡು ಜಿಲ್ಲೆಯ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಗೆ ನೀಡುವ ತರಬೇತಿ ಪೂರ್ಣಗೊಂಡಿದೆ. ಬ್ಲೋಕ್ ತಳಹದಿಯಲ್ಲಿ ಸಿಬ್ಬಂದಿಗೆ ತರಬೇತಿ ಒದಗಿಸಲಾಗಿತ್ತು. ಮತದಾನ ಪ್ರಕ್ರಿಯೆ, ಇ.ವಿ.ಎಂ. ಯಂತ್ರದ ಚಟುವಟಿಕೆ ಸಹಿತ ವಿಚಾರಗಳ ಬಗ್ಗೆ ತರಗತಿಗಳು ನಡೆದುವು. ಪ್ರಿಸೈಡಿಂಗ್ ಅಧಿಕಾರಿಗಳು, ಫಸ್ಟ್ ಪೆÇೀಲಿಂಗ್ ಅಧಿಕಾರಿಗಳು ಮೊದಲಾದವರಿಗಾಗಿ ತರಬೇತಿ ನೀಡಲಾಗಿತ್ತು.