ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ತನಿಖೆ ಆರಂಭಿಸಿ ಐದು ತಿಂಗಳ ಬಳಿಕ ಈ ಪ್ರಕರಣದಲ್ಲಿ ಭಯೋತ್ಪಾದನೆಯ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ತಿಳಿಸಿದೆ. ಫೈಸಲ್ ಫರೀದ್ ಅವರನ್ನು ವಿದೇಶದಿಂದ ಕರೆಸದೆ ತನಿಖೆಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಎನ್ ಐ ಎ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ಪ್ರಶ್ನಿಸಿದ ರಾಬಿನ್ಸ್‍ನ ಕೈಯಿಂದ ಭಯೋತ್ಪಾದಕ ಸಂಪರ್ಕದ ಬಗ್ಗೆ ಯಾವುದೇ ಮಹತ್ವದ ಪುರಾವೆಗಳು ದೊರೆತಿಲ್ಲ ಎಂದು ಎನ್‍ಐಎ ಮೂಲಗಳು ತಿಳಿಸಿದೆ. ಚಿನ್ನ ಕಳ್ಳಸಾಗಣೆಯಲ್ಲಿ ಯುಎಇ ಕಾನ್ಸುಲ್ ಜನರಲ್ ಮತ್ತು ಅಟ್ಯಾಶೆಯ ಪಾತ್ರದ ಬಗ್ಗೆ ಸಂಸ್ಥೆ ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಎನ್ ಐ ಎ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಚಾರ್ಜ್‍ಶೀಟ್ ಸಲ್ಲಿಸಲು ಒಂದು ವಾರ ಇರುವಂತೆ ಈವರದಿ ಬಹಿರಂಗಗೊಂಡಿದೆ.
ಪ್ರಸ್ತುತ, ಎನ್ ಐ ಎ ಗುರುತಿಸಿರುವಂತೆ ಚಿನ್ನ ಕಳ್ಳಸಾಗಣೆ ದೇಶದ ಆರ್ಥಿಕತೆಗೆ ಅಪಾಯವನ್ನುಂಟುಮಾಡಿದೆ ಎಂದು ಬಲವಾಗಿ ಆರೋಪಿಸಿದೆ. ಚಿನ್ನ ಕಳ್ಳಸಾಗಣೆ ಮೂಲಕ ಪಡೆದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗಿದೆ ಎಂಬ ತನಿಖಾ ತಂಡದ ಆರೋಪವನ್ನು ಬೆಂಬಲಿಸಲು ಇನ್ನೂ ಯಾವುದೇ ಪುರಾವೆಗಳಿಲ್ಲ. ಪ್ರಕರಣದ ಆರೋಪಿಗಳ ವಿರುದ್ಧ ಯುಎಪಿಎ ವಿಧಿಸಿರುವ ನಿಯಮಗಳನ್ನು ರದ್ದುಪಡಿಸಲಾಗುವುದು ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಯುಎಇ ಕಾನ್ಸುಲ್ ಜನರಲ್ ಸೇರಿದಂತೆ ತನಿಖೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕು. ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಯುಎಇ ಅಟ್ಯಾಶ್ ನ್ನು ಪ್ರಶ್ನಿಸಲು ಕಸ್ಟಮ್ಸ್ ಹಣಕಾಸು ಸಚಿವಾಲಯದಿಂದ ಅನುಮತಿ ಕೋರಿದೆ. ಪ್ರಕರಣದ ಭಾಗವಾಗಿ ಲಾಕ್ ಡೌನ್ ಸಮಯದಲ್ಲಿ ದೇಶವನ್ನು ತೊರೆದ ವಿದೇಶಿ ಪ್ರಜೆಗಳ ಪಟ್ಟಿಯನ್ನು ಕಸ್ಟಮ್ಸ್ ಸಂಗ್ರಹಿಸುತ್ತಿದೆ.