HEALTH TIPS

ಸಾಧನೆಗೆ ಛಲ ಬೇಕು : ಶೋಭಾ ಎಚ್.ನಾಗರಕಟ್ಟೆ

        ಕಾಸರಗೋಡು: ಸಾಧನೆ ಸಾಕಾರಗೊಳ್ಳಲು ಛಲ ಬೇಕು. ಈಗಿನ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯ, ಸಹಕಾರ ಮತ್ತು ಅದರ ಜೊತೆಯಲ್ಲಿ ಕಲಿಕಾ ಪ್ರಜ್ಞೆ, ಕಲಿಕಾ ಚಟುವಟಿಕೆ ಮತ್ತು ಬದ್ಧತೆಯಿಂದಾಗಿ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಲು ಸಾಧ್ಯವಾಗುತ್ತದೆ ಎಂದು ಕಾಸರಗೋಡು ಕೆಎಸ್‍ಇಬಿ ಸೀನಿಯರ್ ಸುಪರಿಡೆಂಟ್ ಶೋಭಾ ಎಚ್.ರೋಹಿತಾಕ್ಷ ನಾಗರಕಟ್ಟೆ ಅವರು ಹೇಳಿದರು. 

          ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ   ಕಾಸರಗೋಡು ಜಿಲ್ಲಾ ಸಂಘ ಬೀರಂತಬೈಲಿನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಮಂದಿರದಲ್ಲಿ ಆಯೋಜಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ - ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

       ಶಿಕ್ಷಣದ ಮಹತ್ವ, ವಿದ್ಯಾರ್ಥಿಗಳ ಜವಾಬ್ದಾರಿ, ಸದ್ಯದ ಪರಿಸ್ಥಿತಿಯಲ್ಲಿರುವ ಒತ್ತಡಗಳು, ಮಾನಸಿಕ ತುಮುಲತೆಗಳು ವಿದ್ಯಾರ್ಥಿಗಳಲ್ಲಿ ಕಲಿಕಾ ಮಟ್ಟ ಉನ್ನತಿಗೇರಲು ಕಾರಣವಾಗಿದೆ. ಉನ್ನತಿಗೇರಿರುವ ತಾಂತ್ರಿಕ ಸೌಲಭ್ಯಗಳು ಕೂಡಾ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಲು ಕಾರಣವಾಗಿದ್ದು, ಇಂತಹ ಸೌಲಭ್ಯಗಳನ್ನು ಸನ್ಮಾರ್ಗದಲ್ಲಿ ಸಾಗಲು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.   

        ಶಾಲಾ ಹಂತದಲ್ಲೇ ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು  ಬೆಳೆಸಿಕೊಂಡು ಶಿಕ್ಷಣವನ್ನು ಪಡೆಯುವುದರ ಜತೆಗೆ ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಭವಿಷ್ಯದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲು ಸಾಧ್ಯ. ಈ ಮೂಲಕ ನೆಮ್ಮದಿಯ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಇನ್ನೋರ್ವ ಮುಖ್ಯ ಅತಿಥಿ ಕುಂಪಳ ರಾಮರಾಜ   ಕ್ಷತ್ರಿಯ ಸೇವಾ ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಹೂಡೆ ಅವರು ಹೇಳಿದರು. 

       ಪೃಥ್ವಿ ಸಿ.ಎಚ್, ರುಚಿತಾ ರಾವ್, ಸಿದ್ದೀಶ್ ಕೆ.ಎಚ್, ಕೃತಿ ಬೇಕಲ್, ದೀಪಕ್ ಕುಮಾರ್, ದ್ವಿತಿ ಎಂ, ವೈಶಾಕ್, ವೈಷ್ಣವಿ ಎ, ಶ್ರೀದೇವಿ ಸಿ.ಎಚ್, ರಕ್ಷಿತ್ ಜೆ.ಬಿ, ಮೇಘಾ ಶಿವರಾಜ್, ರೇಶ್ಮ ರಾವ್, ರಿಯಾ ದಯಾನಂದ, ವರ್ಷ ಕೆ.ವಿ. ಅವರನ್ನು ಪ್ರತಿಭಾ ಪುರಸ್ಕಾರವಿತ್ತು ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟ್ರಮಣ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಲೋಕೇಶ್ ಅಣಂಗೂರು ಅವರು ಸ್ವಾಗತಿಸಿದರು. ಉಪಾಧ್ಯಕ್ಷ ಸತೀಶ್ ಮಾಸ್ಟರ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಬಿ.ರಾಮಮೂರ್ತಿ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries