HEALTH TIPS

ಕೇರಳದಲ್ಲಿ ಹೊಸ ಟ್ರೆಂಡ್-ಕ್ರಿಸ್‍ಮಸ್ ನಕ್ಷತ್ರದ ಬದಲು ಮಕರ ನಕ್ಷತ್ರ

        ಕುಂಬಳೆ: ಕ್ರಿಸ್‍ಮಸ್ ಆಗಮಿಸುತ್ತಿರುವಂತೆ ಕೇರಳದ ಹೆಚ್ಚಿನ ಮನೆಗಳಲ್ಲಿ ನಕ್ಷತ್ರ ದೀಪಗಳನ್ನು ನೇತುಹಾಕಲಾಗುತ್ತದೆ. ಅದರಲ್ಲಿ ಯಾವುದೇ ಜಾತಿ ಅಥವಾ ಧರ್ಮಗಳ ಬೇಧಗಳಿರುವುದಿಲ್ಲ. ಆದರೆ ಈ ಬಾರಿ ವಿಶೇಷವೆಂಬಂತೆ ಹಿಂದುವಾದಿಗಳ ಗುಂಪೊಂದು ಕ್ರಿಸ್‍ಮಸ್ ನಕ್ಷತ್ರದ ಬದಲು ಮಕರ ನಕ್ಷತ್ರವನ್ನು ನೇತಾಡಿಸಲು ಕರೆ ನೀಡಿದ್ದಾರೆ. ಅಂತಹ ಜನರು ಸಾಮಾಜಿಕ ಮಾಧ್ಯಮಗಳ ಮೂಲಕ ಭಾರೀ ಸಂದೇಶಗಳನ್ನು ಹರಿಯಬಿಡುತ್ತಿರುವುದು ಕಂಡುಬಂದಿದೆ. 

       ನಕ್ಷತ್ರ ಹಾಗೂ ಮಕರದ ಚಿತ್ರದೊಂದಿಗೆ ಸಂಖ್ಯೆಯೊಂದನ್ನು ನೀಡಿದ್ದು ಖರೀದಿಸಲು ಬಯಸುವವರು ಕರೆ ಮಾಡಬೇಕು ಎಂದು ಸಾಮಾಜಿಕ ಮಾಧ್ಯಮ ಪೆÇೀಸ್ಟ್ ಹೇಳುತ್ತದೆ. ನೀವು ವಾಟ್ಸಾಪ್ ಮೂಲಕ ಮಕರ ನಕ್ಷತ್ರವನ್ನು ಸಹ ಖರೀದಿಸಬಹುದು.

     ಈ ಪೆÇೀಸ್ಟ್ ಕೆಳಗೆ ಅನೇಕ ಜನರು ಪ್ರತಿಕ್ರಿಯೆಗಳನ್ನೂ ಬರೆದಿದ್ದಾರೆ. "ಹಿಂದೂಗಳು ಏಕೆ ಇತರರನ್ನು ಅನುಕರಿಸಬೇಕು. ಮಕರ ನಕ್ಷತ್ರದ ಹೆಸರಿನಲ್ಲಿ ಈ ಮೊದಲು ಮನೆಯಲ್ಲಿ ದೀಪಗಳನ್ನು ನೇತಾಡಿಸಿದ್ದು  ನೆನಪಿಲ್ಲ" ಎಂದು ಚಂದ್ರನ್ ಮೋಹನ್ ಎಂಬವರು ಕಾಮೆಂಟ್ ಬರೆದಿದ್ದಾರೆ. ಜೊತೆಗೆ ಇನ್ನೂ ಅನೇಕ ಆಸಕ್ತಿದಾಯಕ ಕಾಮೆಂಟ್‍ಗಳಿವೆ.

       "ಸಹೋದರ, ಎರಡು ನಕ್ಷತ್ರಗಳು ಜೊತೆಗೇ ಹಾಕಿದಲ್ಲಿ  ಅಯ್ಯಪ್ಪ ಸ್ವಾಮಿಯ ಶಕ್ತಿ-ಕಾರ್ಣಿಕಕ್ಕೆ ಏನಾದರೂ ಹಾನಿ ಉಂಟಾಗಬಹುದೇ?" ಎಂದು ಸುರೇಶ್ ಪಿಕೆ ಕೇಳುತ್ತಾರೆ. "ಸಾಂತಾಕ್ಲಾಸ್ ಬದಲಿಗೆ ದುರ್ವಾಸ ಮಹರ್ಷಿಯನ್ನು ಕಳುಹಿಸಬೇಕಾಗುವುದೇ?" ಎಂದು ಜಿನೇಶ್ ದೇವಸ್ಯ ಬರೆದಿದ್ದಾರೆ. 

      ಬದಲಾಗುತ್ತಿರುವ ಕಾಲಮಾನದಲ್ಲಿ ಕಮ್ಯುನಿಸ್ಟ್ ರಾಜ್ಯವೆಂದೇ ಪರಿಗಣಿತವಾಗಿರುವ ಕೇರಳದಲ್ಲೂ ಹಿಂದೂಪರವಾದ ಚಿಂತನೆಗಳು ಇತ್ತೀಚೆಗೆ ಬೆಳೆದುಬರುತ್ತಿರುವುದು ಕೆಲವೆಡೆ ತಲ್ಲಣಕ್ಕೂ ಕಾರಣವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries