ತಿರುವನಂತಪುರ: 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಿದ ಬಳಿಕ ಅಧಿಕಾರಿಗಳು ಪರೀಕ್ಷೆಯ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ವ್ಯಾಪಕತೆಯ ಬಳಿಕ ವಿದ್ಯಾರ್ಥಿಗಳ ಅಧ್ಯಯನವನ್ನು ಆನ್‍ಲೈನ್‍ನಲ್ಲಿ ನಿರ್ವಹಿಸಲಾಗುತ್ತಿದೆ. ಕೇರಳದಲ್ಲಿ ಶಾಲೆಗಳು ಇನ್ನೂ ಪುನರಾರಂಭಗೊಳ್ಳದಿದ್ದರೂ, ವಿವಿಧ ತರಗತಿಗಳಿಗೆ ಪರೀಕ್ಷಾ ವ್ಯವಸ್ಥೆಗಳನ್ನು ಬಿಡುಗಡೆ ಮಾಡಲಾಗಿದೆ. 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಿದ ಬೆನ್ನಲ್ಲೇ ಅಧಿಕಾರಿಗಳು ಪರೀಕ್ಷೆಯ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿರುವರು. ಮಾರ್ಚ್ 17 ರಿಂದ ಬೆಳಿಗ್ಗೆ ಪ್ಲಸ್ ಟು ಪರೀಕ್ಷೆ ಮತ್ತು ಮಧ್ಯಾಹ್ನ ಬಳಿಕ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ವಿದ್ಯಾರ್ಥಿಗಳಿಗೆ ಬಗ್ಗೆ ಇದೆ ಕಾಳಜಿ:
ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದ ಬಳಿಕ ವಿದ್ಯಾರ್ಥಿಗಳಲ್ಲಿ ಕಳವಳಗಳು ಹೆಚ್ಚಿವೆ. ಮಾರ್ಚ್ ಮೊದಲು ಪಾಠಗಳು ಪೂರ್ಣಗೊಳ್ಳುತ್ತವೆಯೇ ಅಥವಾ ಪ್ರಾಯೋಗಿಕ ಸಮಯವಿದೆಯೇ ಎಂಬುದು ಮುಖ್ಯವಾಗಿ ಆತಂಕ ಮೂಡಿಸಿದೆ. ಜನವರಿಯಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ಆಗಮಿಸಿದಾಗ ಮಾಡಬೇಕಾದ ವ್ಯವಸ್ಥೆಗಳ ಬಗ್ಗೆ ಶಾಲೆಗಳಿಗೂ ಸವಾಲುಗಳಿವೆ. ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಲ್ಲಿ ಬಗೆಹರಿಯದ ಸಂಶಯಗಳನ್ನು ಪರಿಹರಿಸಲು ಶಾಲೆಗೆ ಆಗಮಿಸಿದಾಗ ಸಾರ್ವಜನಿಕ ಸಾರಿಗೆಯನ್ನು ಬಳಸುವಲ್ಲಿನ ಸಮಸ್ಯೆಗಳು ಮತ್ತು ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಮಕ್ಕಳು ಗುಂಪುಗಳಾಗಿ ಬಳಸುವ ವ್ಯವಸ್ಥೆಗಳನ್ನು ಕೋವಿಡ್ ನಿಬಂಧನೆಗಳಿಗೆ ಅನುಸಾರ ಪ್ರಾಯೋಗಿಕ ಬಳಕೆಗೆ ಲಭ್ಯವಾಗುವಂತೆ ಮಾಡುವಲ್ಲಿನ ಮಿತಿಗಳು ಮುಖ್ಯ ಸಮಸ್ಯೆಗಳು.
ಮಾದರಿ ಪರೀಕ್ಷೆ ನಡೆಸಲಾಗುವುದು:
ವಿದ್ಯಾರ್ಥಿಗಳಿಗೆ ತರಗತಿ ಪರೀಕ್ಷೆಗಳನ್ನು ನಡೆಸಲು ಒತ್ತು ನೀಡಲಾಗುವುದು. ಸಾಧ್ಯವಾದರೆ, ಮಾದರಿ ಪರೀಕ್ಷೆಯ ನಂತರ ಪೋಷಕರನ್ನು ಆನ್‍ಲೈನ್‍ನಲ್ಲಿ ಸಂಪರ್ಕಿಸಲಾಗುತ್ತದೆ. ಮಕ್ಕಳ ಪೋಷಕರ ಅನುಮತಿಯೊಂದಿಗೆ ಮಾತ್ರ ಶಾಲೆಗೆ ಹಾಜರಾಗಲು ಅವಕಾಶವಿರುತ್ತದೆ ಮತ್ತು ಅವರ ಸಮಸ್ಯೆಗಳನ್ನು ಅವಲೋಕಿಸಿ ಪರಿಹರಿಸಲಾಗುತ್ತದೆ.
ವಿದ್ಯಾರ್ಥಿ ಸ್ನೇಹೀ ಪರೀಕ್ಷೆ:
ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ತರಗತಿಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಶ್ನೆಗಳನ್ನು ನೀಡಿ ಅದರಿಂದ ಸುಲಭವಾಗುವುದನ್ನು ಆಯ್ಕೆ ಮಾಡಿ ಉತ್ತರ ಬರೆಸುವ ಸಾಧ್ಯತೆ ಇದೆ. ಶುಕ್ರವಾರ ನಡೆದ ಶಿಕ್ಷಣ ಗುಣಮಟ್ಟ ಸಮಿತಿ (ಕ್ಯೂಐಪಿ) ಸಭೆಯಲ್ಲಿ ಪರೀಕ್ಷೆಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕು ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಅವರು ಪರೀಕ್ಷೆಗಳಿಗೆ ಹೆದರಬಾರದು ಎಂದು ಸೂಚನೆಗಳು ನಿರ್ದೇಶಿಸಲ್ಪಟ್ಟಿತು.
ಜನವರಿ 1 ರಿಂದ ಪರೀಕ್ಷೆಗಳಿಗೆ ಪ್ರಾಯೋಗಿಕ ತರಗತಿಗಳು:
ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ಪರೀಕ್ಷೆಗಳ ಪ್ರಾಯೋಗಿಕ ತರಗತಿಗಳು ಜನವರಿ 1 ರಿಂದ ಪ್ರಾರಂಭವಾಗಲಿವೆ. ಕೋವಿಡ್ ಫಸ್ಟ್ ಲೈನ್ ಚಿಕಿತ್ಸಾ ಕೇಂದ್ರಗಳಾಗಿದ್ದ ಶಾಲೆಗಳನ್ನು ಈ ಮಾಸಾಂತ್ಯದಲ್ಲಿ ಕೋವಿಡ್ ನಿಯಮಾನುಸಾರ ಶುಚೀಕರಣಗೊಳಿಸಲಾಗುವುದು. ಶಾಲೆಗಳು ಹತ್ತನೇ ಮತ್ತು ಹನ್ನೆರಡನೇ ತರಗತಿಯ ಬೋಧನೆಗೆ ಪ್ರತಿದಿನ ಆಗಮಿಸಬೇಕಾದ ಶಿಕ್ಷಕರ ಸಂಖ್ಯೆಯನ್ನು ಆಯಾ ಶಾಲೆಗಳು ಕ್ರಮೀಕರಿಸಲು ಸೂಚಿಸಲಾಗಿದೆ.