ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ವೇಳೆ ಭಾಷಾ ಅಲ್ಪಸಂಖ್ಯಾತರಿರುವ ಪ್ರದೇಶಗಳಲ್ಲಿ ಬಾಲೆಟ್ ಪೇಪರ್, ಮತಯಂತ್ರಗಳಲ್ಲಿ ಲಗತ್ತಿಸಲಾಗುವ ಬಾಲೆಟ್ ಲೇಬಲ್ ಇತ್ಯಾದಿಗಳನ್ನು ಕನ್ನಡ ಮತ್ತು ತಮಿಳು ಭಾಷೆಗಳಲ್ಲೂ ಮುದ್ರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಂದು ರಾಜ್ಯ ಚುನಾವಣೆ ಕಮೀಷನರ್ ವಿ.ಭಾಸ್ಕರನ್ ಆದೇಶ ಪ್ರಕಟಿಸಿದರು.
ಕಾಸರಗೋಡು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕನ್ನಡದಲ್ಲಿ, ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಇಡುಕ್ಕಿ, ಪಾಲಕ್ಕಾಡ್, ವಯನಾಡ್ ಜಿಲ್ಲೆಗಳಲ್ಲಿ ತಮಿಳು ಭಾಷೆಯಲ್ಲೂ ಬಾಲೆಟ್ ಪೇಪರ್, ಲೇಬಲ್ ಮುದ್ರಿಸಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ 4 ಬ್ಲಾಕ್ ಪಂಚಾಯತ್ ಗಳ ವ್ಯಾಪ್ತಿಯ 18 ಗ್ರಾಮ ಪಂಚಾಯತ್ ಗಳ 228 ವಾರ್ಡ್ ಗಳಲ್ಲಿ ಕನ್ನಡದಲ್ಲಿ ಇವುಗಳ ಮುದ್ರಣ ನಡೆಯಲಿದೆ.