ಕಾಸರಗೋಡು: ಮಾನವ ಹಕ್ಕು ದಿನಾಚರಣೆ ಮತ್ತು ಪ್ರೊಬೇಷನ್ ಸಪ್ತಾಹ ಸಮಾರೋಪ ವೆಬಿನಾರ್ ಕಾರ್ಯಕ್ರಮ ಇಂದು(ಡಿ.10) ಸಂಜೆ 7 ಗಂಟೆಯಿಂದ ನಡೆಯಲಿದೆ.
ಜಿಲ್ಲಾ ಪ್ರೊಬೇಷನ್ ಕಚೇರಿ, ಕಾಸರಗೋಡು ಡಿ.ಎಲ್.ಎಸ್.ಎ, ಕಾನೂನು ಮತ್ತು ನ್ಯಾಯ ಸಂಶೋಧನೆಫೌಂಡೇಶನ್, ಪೆರಿಯ ಕೇಂದ್ರ ಕೇರಳ ವಿವಿಯ ಸಾಮಾಜಿಕ ಚಟುವಟಿಕೆ ಇಲಾಖೆ ಜಂಟಿವತಿಯಿಂದ ಸಮಾರಂಭ ನಡೆಯಲಿದೆ. ಗೂಗಲ್ ಮೀಟ್ ಮೂಲಕ ಅಡೀಶನಲ್ ಜಿಲ್ಲಾ ನ್ಯಾಯಮೂರ್ತಿ ಆರ್.ಎಲ್.ಬೈಜು ಉದ್ಘಾಟಿಸುವರು. ಡಿ.ಎಲ್.ಎಸ್.ಎ. ಕಾರ್ಯದರ್ಶಿ ಎಂ.ಸುಹೈಬ್ ಅಧ್ಯಕ್ಷತೆ ವಹಿಸುವರು. ಪರಿಣತರು ವಿವಿಧ ವಿಷಯಗಳಲ್ಲಿ ಉಪನ್ಯಾಸ ನಡೆಸುವರು.