ಮಂಗಳೂರು: ಬೆಂಗಳೂರು- ಮಂಗಳೂರು ನಡುವಿನ ವಾರಕ್ಕೆ ನಾಲ್ಕು ದಿನ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಕುಣಿಗಲ್ ಮೂಲಕ ಸೀಮಿತ ಅವಧಿಗೆ ಪುನರಾರಂಭಿಸಲು ರೈಲ್ವೆ ನಿರ್ಧರಿಸಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಪುನರಾರಂಭಿಸಲಾದ ವಿಶೇಷ ರೈಲು ಸೇವೆಯನ್ನು ಪ್ರಯಾಣಿಕರಿಂದ ಹೆಚ್ಚು ಪೆÇ್ರೀತ್ಸಾಹದ ಕೊರತೆಯಿಂದ ಸೆಪ್ಟೆಂಬರ್ ಅಂತ್ಯದ ವೇಳೆಗೆ ರದ್ಧುಪಡಿಸಲಾಗಿತ್ತು.
ವಿಶೇಷ ಎಕ್ಸ್ ಪ್ರೆಸ್ ಈ ರೈಲು ಕೆಎಸ್ ಆರ್ ಬೆಂಗಳೂರು - ಮಂಗಳೂರು ಕೇಂದ್ರ ನಡುವೆ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಡಿ.8ರಿಂದ 24ರವರೆಗೆ ಸಂಚರಿಸಲಿವೆ. ಬೆಂಗಳೂರಿನಿಂದ ರಾತ್ರಿ 10-30 ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ 8-35ಕ್ಕೆ ಮಂಗಳೂರಿಗೆ ಆಗಮಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.