ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಸಿದ್ಧತೆಗಳನ್ನು ಅವಲೋಕನ ನಡೆಸುವ ನಿಟ್ಟಿನಲ್ಲಿ ಚುನಾವಣೆ ನಿರೀಕ್ಷಕ ನರಸಿಂಹುಗಾರಿ ಟಿ.ಎಲ್.ರೆಡ್ಡಿ ಅವರು ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಉಪಸ್ಥಿತರಿದ್ದರು.
ಅಂಚೆ ಮತಯಪತ್ರಕ್ಕಿರುವ ಅರ್ಜಿ ಡಿ.12 ಮಧ್ಯಾಹ್ನ 3 ಗಂಟೆ ವರೆಗೆ ಸ್ವೀಕರಿಸಲಾಗುವುದು ಎಂದು ನಿರೀಕ್ಷಕ ತಿಳಿಸಿದರು. ಕೋವಿಡ್ ವಿಶೇಷ ಅಂಚೆ ಮತಪತ್ರಕ್ಕಾಗಿ ಇತರ ಜಿಲ್ಲೆಗಳಿಂದ ಈ ವರೆಗೆ 6 ಅರ್ಜಿಗಳು ಲಭಿಸಿವೆ. ಕೋವಿಡ್ 19 ರೋಗಿಗಳು ಮತ್ತು ಅವರ ಸಂಪರ್ಕ ಪಟ್ಟಿಯಲ್ಲಿರುವ ಮಂದಿಗಾಗಿ ಜಿಲ್ಲಾ ವೈದ್ಯಾಧಿಕಾರಿ ಅವರು ಸಿದ್ಧಪಡಿಸಿರುವ ಪಟ್ಟಿಯಲ್ಲಿರುವ ಮಮದಿಗಾಗಿ ವಿಶೇಷ ಅಂಚೆ ಮತಪತ್ರ ನೀಡುಲಾಗುತ್ತದೆ. ಫಾರಂ 19ರಲ್ಲಿ ವಿಶೇಷ ಅಂಚೆ ಮತಪತ್ರ ನೀಡಲಾಗುವುದು. ಮತದಾನ ನಡೆಸಿರುವ ಬಾಲೆಟ್ ಗಳನ್ನು ಮತ ಎಣಿಕೆಯ ದಿನ ಬೆಳಗ್ಗೆ 8 ಗಂಟೆ ವರೆಗೆ ಸ್ವೀಕರಿಸಲಾಗುವುದು. ಬ್ಲೋಕ್ ಪಂಚಾಯತ್ ಗಿರುವ ಅಂಚೆ ಮತಪತ್ರಗಳು ಮುಧ್ರಣಗೊಮಡು ತಲಪಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಮಾದರಿ ನೀತಿಸಂಹಿತೆಜಾರಿ ಸಂಬಂಧ ಮಾತುಕತೆ ನಡೆಸಲಾಯಿತು.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಚುನಾವಣೆ ನೋಡೆಲ್ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.