ನವದೆಹಲಿ: ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಹಬ್ಬದ ಸೀಸನ್‌ಗಳಲ್ಲಿ ಲಕ್ಷಾಂತರ ಭಾರತೀಯರನ್ನು ಚೀನಾದ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದರು ಎಂದು ಸೈಬರ್‌ಪೀಸ್ ಫೌಂಡೇಶನ್, ಸೈಬರ್ ಸೆಕ್ಯುರಿಟಿ ಥಿಂಕ್ ಟ್ಯಾಂಕ್ ಕಂಡುಹಿಡಿದಿದೆ.
ಹಬ್ಬದ ಸಂದರ್ಭದಲ್ಲಿ ಜನರು ಹೆಚ್ಚಾಗಿ ಶಾಪಿಂಗ್‌ನಲ್ಲಿ ತೊಡಗಿಸಿಕೊಂಡಿರುತ್ತಾರೆ. ಹೀಗಾಗಿ ಅನೇಕ ಆನ್‌ಲೈನ್ ವೆಬ್‌ಸೈಟ್ ತಾಣಗಳು ವಿವಿಧ ರೀತಿಯ ಕೊಡುಗೆಗಳನ್ನು ನೀಡುತ್ತವೆ. ಇದನ್ನೇ ಮೋಸದ ಜಾಲಕ್ಕೆ ಬಳಸಿಕೊಂಡಿದ್ದ ಹ್ಯಾಕರ್ಸ್ ನಕಲಿ ಲಿಂಕ್‌ಗಳನ್ನು ರಚಿಸಿದ್ದರು ಮತ್ತು ಆನ್‌ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನವನ್ನು ಗೆಲ್ಲಿ ಎಂದು ಬಳಕೆದಾರರಿಗೆ ಕ್ಲಿಕ್ ಮಾಡಲು ಪ್ರಚೋದಿಸಿ ಮೋಸಗೊಳಿಸಿದರು.
ಗುವಾಂಗ್‌ಡಾಂಗ್ ಮತ್ತು ಹೆನಾನ್ ಪ್ರಾಂತ್ಯಗಳನ್ನು ಆಧರಿಸಿದ ಚೀನಾದ ಹ್ಯಾಕರ್ಸ್ ಅಕ್ಟೋಬರ್ ಮತ್ತು ನವೆಂಬರ್ ಸಮಯದಲ್ಲಿ ಲಕ್ಷಾಂತರ ಭಾರತೀಯರನ್ನು ಶಾಪಿಂಗ್ ತಾಣಗಳಲ್ಲಿ ಗುರಿಯಾಗಿಸಿಕೊಂಡಿದ್ದಾರೆ ಎಂಬುದು ತಡವಾಗಿ ಬಹಿರಂಗಗೊಂಡಿದೆ.
ಉದಾಹರಣೆಗೆ ಅಮೆಜಾನ್ ಬಿಗ್ ಬಿಲಿಯನ್ ಡೇಸ್ , ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ಸ್ ಡೇ ಈ ರೀತಿಯಾದಂತಹ ವಿಶೇಷ ಕೊಡುಗೆ ದಿನಗಳಲ್ಲಿ ಸೈಟ್‌ಗಳ ರೀತಿಯಲ್ಲಿ ಹ್ಯಾಕರ್ಸ್ ಗುರಿಯಾಗಿಸಿ ನಕಲಿ ಲಿಂಕ್‌ಗಳನ್ನು ಕಳುಹಿಸಿ ಜನರನ್ನು ಮೋಸಗೊಳಿಸಲು ಪ್ರಯತ್ನಿಸಿದ್ದಾರೆ.