ತಿರುವನಂತಪುರ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮುಚ್ಚಲಾದ ಅಂಗನವಾಡಿಗಳ ಚಟುವಟಿಕೆಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ, ಸಾಮಾಜಿಕ ನ್ಯಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕೆ.ಕೆ.ಶೈಲಜಾ ಇಂದು ತಿಳಿಸಿದ್ದಾರೆ.
ಎಲ್ಲಾ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಮುಂದಿನ ಸೋಮವಾರದಿಂದ ಬೆಳಿಗ್ಗೆ 9.30 ಕ್ಕೆ ಅಂಗನವಾಡಿಗಳಿಗೆ ತಲುಪಬೇಕು. ಮಕ್ಕಳ ಆಗಮನದ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ದೇಶಾದ್ಯಂತ ಕರೋನಾ ವೈರಸ್ ಹರಡುವ ಸಾಧ್ಯತೆ ಗಮನಿಸಿ ಅಂಗನವಾಡಿ, ಪ್ರಿಸ್ಕೂಲ್ ಮಾರ್ಚ್ 10 ರಿಂದ ತಾತ್ಕಾಲಿಕ ರಜೆ ಘೋಷಿಸಲಾಗಿದ್ದು,ಬಳಿಕ ಲಾಕ್ ಡೌನ್ ಬಳಿಕ ಈವರೆಗೂ ತೆರೆದು ಕಾರ್ಯಾಚಿಸಿಲ್ಲ.
ಕೋವಿಡ್ ಸನ್ನಿವೇಶದಲ್ಲಿ, ಫೀಡಿಂಗ್ ಟೇಕ್ ನ್ನು ಹೋಮ್ ರೇಷನ್, ಸುದಾರ್ಯ ಕೇರಳ, ಯೋಜನೆಗೆ ಸಂಬಂಧಿಸಿದ ಸಮೀಕ್ಷೆಗಳು, ದೈನಂದಿನ ಮನೆ ಭೇಟಿ ಇತ್ಯಾದಿಗಳನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಬೇಕು ಎಂದು ಸೂಚಿಸಲಾಗಿತ್ತು.
ಆದಾಗ್ಯೂ, ಕೋವಿಡ್ ವ್ಯಾಪಕತೆಯ ನಂತರ, ಅನೇಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗಲಿಲ್ಲ. ಈ ಎಲ್ಲ ಸಮೀಕ್ಷೆಗಳನ್ನು ನಿಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿಯೇ ಕೋವಿಡ್ ಮಾನದಂಡಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಅಂಗನವಾಡಿಗಳ ಕಾರ್ಯಾಚರಣೆಯನ್ನು ಪುನರಾರಂಭಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ.